ಕೊಡಗಿನಲ್ಲಿ 14 ಹೊಸ ಕೊವೀಡ್ ಪ್ರಕರಣ ಪತ್ತೆ

15/08/2020

ಮಡಿಕೇರಿ ಆ. 15 : ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8 ಗಂಟೆ ವೇಳೆಗೆ 14 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ.
ಕುಶಾಲನಗರ ಮಾರ್ಕೆಟ್ ರಸ್ತೆಯ ಕಾವೇರಿ ಕಾಂಪ್ಲೆಕ್ಸಿನ 18 ವರ್ಷದ ಪುರುಷ.
ಸುಂಟಿಕೊಪ್ಪ ಅಂಬೇಡ್ಕರ್ ಬಡಾವಣೆಯ 19 ವರ್ಷದ ಮಹಿಳೆ.
ಸೋಮವಾರಪೇಟೆ ಶನಿವಾರಸಂತೆಯ ಅರಣ್ಯ ವಸತಿ ಗೃಹದ 35 ವರ್ಷದ ಮಹಿಳೆ.
ಸೋಮವಾರಪೇಟೆ ಬಜಿಗುಂಡಿ ಮಾರಿಯಮ್ಮ ದೇವಾಲಯ ಬಳಿಯ 5 ವರ್ಷದ ಬಾಲಕಿ.
ಮಡಿಕೇರಿ ಮುನೀಶ್ವರ ದೇವಾಲಯ ರಸ್ತೆಯ ರಾಜದರ್ಶನ್ ಹಿಂಭಾಗದ 51 ವರ್ಷದ ಮಹಿಳೆ.
ಸೋಮವಾರಪೇಟೆ ಚೆಟ್ಟಳ್ಳಿಯ 46 ವರ್ಷದ ಮಹಿಳೆ, 20 ವರ್ಷದ ಪುರುಷ ಮತ್ತು 22 ವರ್ಷದ ಮಹಿಳೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮುತ್ತಪ್ಪ ದೇವಾಲಯದ 57 ವರ್ಷದ ಮಹಿಳೆ.
ವಿರಾಜಪೇಟೆಯ ಅಂಬೇಡ್ಕರ್ ನಗರದ 15 ವರ್ಷದ ಬಾಲಕ, 24 ಮತ್ತು 23 ವರ್ಷದ ಪುರುಷರು.
ಶನಿವಾರಸಂತೆ ಬೈಪಾಸ್ ರಸ್ತೆಯ 41 ವರ್ಷದ ಪುರುಷ.
ಕೂಡುಮಂಗಳೂರಿನ ಜನತಾ ಕಾಲೋನಿಯ 54 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 936 ಆಗಿದ್ದು, 625 ಮಂದಿ ಗುಣಮುಖರಾಗಿದ್ದಾರೆ. 299 ಸಕ್ರಿಯ ಪ್ರಕರಣಗಳಿದ್ದು, 12 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 261 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.