ಬೇಟೆಗೆಂದು ಹೋದವನು ಗುಂಡೇಟಿಗೆ ಬಲಿಯಾದ : ಮಕ್ಕಂದೂರಿನಲ್ಲಿ ಘಟನೆ

August 15, 2020

ಮಡಿಕೇರಿ ಆ. 15 : ಬೇಟೆಗೆಂದು ತೆರಳಿದ್ದ ವ್ಯಕ್ತಿಯೊಬ್ಬ ಜೊತೆಯಲ್ಲಿದ್ದವನ ಗುಂಡೇಟಿಗೆ ಬಲಿಯಾದ ಘಟನೆ ಮಕ್ಕಂದೂರು ಗ್ರಾಮದ ಉದಯಗಿರಿ ಎಂಬಲ್ಲಿ ನಡೆದಿದೆ.
ಮಡಿಕೇರಿ ತಾಲ್ಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶಿವ ಬೋಪಣ್ಣ (37) ಮೃತ ವ್ಯಕ್ತಿ. ಆಕಸ್ಮಿಕವಾಗಿ ಗುಂಡು ತಗುಲಿದೆ ಎಂದು ತಪ್ಪೊಪ್ಪಿಕೊಂಡಿರುವ ಆರೋಪಿ ಮಡಿಕೇರಿಯ ನಿವಾಸಿ ದೇವಯ್ಯ ಪೊಲೀಸರಿಗೆ ಶರಣಾಗಿದ್ದಾನೆ. ಜೊತೆಯಲ್ಲಿದ್ದ ಶರಣ್ ಎಂಬುವವರಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

error: Content is protected !!