ಕಾಂತೂರಿನಲ್ಲಿ ಉಪಕಾರದಳ ಚಾರಿಟಿ ಟ್ರಸ್ಟ್ ನಿಂದ ಸ್ವಾತಂತ್ರ್ಯ ದಿನಾಚರಣೆ

August 15, 2020

ಮಡಿಕೇರಿ ಆ. 15 : ಮೂರ್ನಾಡು ಪಂಚಾಯಿತಿ ವ್ಯಾಪ್ತಿಯ ಕಾಂತೂರು ಗ್ರಾಮದಲ್ಲಿ ಉಪಕಾರದಳ ಚಾರಿಟಿ ಟ್ರಸ್ಟ್ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನುಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಪಿಡಿಓ ಚಂದ್ರಮೌಳಿ ಧ್ವಜಾರೋಹಣ ನೆರವೇರಿಸಿದರು. ಜಿ.ಪಂ ಮಾಜಿ ಅಧ್ಯಕ್ಷರಾದ ದೀರ್ಘಕೇಶಿ ಶಿವಣ್ಣ, ಪಂಚಾಯಿತಿ ಸದಸ್ಯರುಗಳಾದ ಕುಟ್ಟಪ್ಪ, ನಂದಕುಮಾರ್, ಈರ ಸುಬ್ಬಯ್ಯ ದಿನದ ಕುರಿತು ಮಾತನಾಡಿದರು.
ಸಂಘದ ಅಧ್ಯಕ್ಷರಾದ ಕೆರೆಮನೆ ಪದ್ಮಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಸ್ಟ್‍ನ ಸದಸ್ಯರುಗಳಾದ ಲೀಲೇಶ್, ರಿಯಾಸ್, ಮಂಜು, ಪ್ರಭು ಉಪಸ್ಥಿತರಿದ್ದರು. ಕಾರ್ಯದರ್ಶಿ ಎಂ. ಜಿ. ಅಬ್ದುಲ್ ಲತೀಫ್ ಸ್ವಾಗತಿಸಿ, ನವೀನ್ ಕುಮಾರ್ ವಂದಿಸಿದರು.