ತಲಕಾವೇರಿ ಕಾರ್ಯಾಚರಣೆ ಬಗ್ಗೆ ಡಿಸಿಗೆ ಸಂಪೂರ್ಣ ಅಧಿಕಾರ : ಸಚಿವ ಸೋಮಣ್ಣ

August 15, 2020

ಮಡಿಕೇರಿ ಆ. 15 : ಗಜಗಿರಿ ಬೆಟ್ಟ ಕುಸಿದು ದುರಂತ ಸಂಭವಿಸಿದ ಸ್ಥಳದಲ್ಲಿ ಇನ್ನೂ ಇಬ್ಬರು ಪತ್ತೆಯಾಗಬೇಕಾಗಿದ್ದು, ಕಾರ್ಯಾಚರಣೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಕಾರ್ಯಾಚರಣೆ ನಡೆಯುತ್ತಿರುವ ತಲಕಾವೇರಿಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಇಂದು ಒಂದು ಮೃತದೇಹ ಪತ್ತೆಯಾಗಿದೆ. ಉಳಿದ ಇಬ್ಬರಿಗಾಗಿ ಎರಡು ದಿನ ಕಾರ್ಯಾಚರಣೆ ನಡೆಯಲಿದೆ. ಶಾಸಕ ಬೋಪಯ್ಯ ಅವರ ಸಲಹೆಯನ್ನು ಡಿಸಿ ಪಡೆಯಲಿದ್ದಾರೆ ಎಂದರು.

error: Content is protected !!