ಮಡಿಕೇರಿ ಓಂಕಾರ್ ಆಟೋ ನಿಲ್ದಾಣದಲ್ಲಿ ಸ್ವಾತಂತ್ರ್ಯ ಸಂಭ್ರಮ
15/08/2020

ಮಡಿಕೇರಿ ಆ. 15 : ನಗರದ ಬ್ರಾಹ್ಮಣರ ಬೀದಿಯ ಓಂಕಾರ್ ಆಟೋ ನಿಲ್ದಾಣದಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರ ಠಾಣೆಯ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹೋರಾಟಗಾರರ ತ್ಯಾಗವನ್ನು ಸ್ಮರಿಸಿದರು.
ಪ್ರಮುಖರಾದ ಸುನೀಲ್, ಹೇಮಂತ್ ಕುಮಾರ್ , ಮೋಹನ್,ಹರೀಶ್,ಯತೀಶ್ ಉಮೇಶ್ ಹಾಗೂ ಚಾಲಕರು ಹಾಜರಿದ್ದರು.

