ಸುಂಟಿಕೊಪ್ಪದಲ್ಲಿ ಅರ್ಥಪೂರ್ಣವಾಗಿ ಜರುಗಿದ ಸ್ವಾತಂತ್ರ್ಯ ದಿನಾಚರಣೆ

August 15, 2020

ಮಡಿಕೇರಿ ಆ. 15 : ಸುಂಟಿಕೊಪ್ಪದ ಸುನ್ನಿ ಶಾಫಿ ಜುಮ್ಮಾ ಮಸೀದಿ ಹಾಗೂ ಎಸ್‍ಕೆಎಸ್‍ಎಸ್‍ಎಫ್ ಸುಂಟಿಕೊಪ್ಪ ಶಾಖೆ ಇದರ ಜಂಟಿ ಆಶ್ರಯದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಸೀದಿ ಆವರಣದಲ್ಲಿ ಸಿ. ಎಂ. ಹಮೀದ್ ಮೌಲವಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶ ಬಲಿಷ್ಠ ಮತ್ತು ಪ್ರಗತಿಯನ್ನು ಸಾಧಿಸಬೇಕಾದರೆ ಜಾತಿ ಧರ್ಮ ಪಕ್ಷಬೇಧವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.
ಎಸ್‍ಕೆಎಸ್‍ಎಸ್‍ಎಫ್ ಫ್ರೀಡಂ ಸ್ಟಾರ್ ಅಂಗವಾಗಿ ನಾಸಿರ್ ಫೈಝಿ ಅವರು ಪ್ರತಿಜ್ಞಾ ವಿಧಿ ಭೋದನೆ ಮಾಡಿದರು.
ಕಾರ್ಯಕ್ರಮದಲ್ಲಿ ಮಸೀದಿ ಆಡಳಿತ ಮಂಡಳಿಯ ಉಪಾಧ್ಯಕ್ಷ ರಫೀಕ್ ಹಾಜಿ, ಕಾರ್ಯದರ್ಶಿ ಸೂಫಿ, ಖಜಾಂಜಿ ಮೊಹಮ್ಮದ್, ಕೆ.ಎ. ಉಸ್ಮಾನ್ ಎಸ್‍ಕೆಎಸ್‍ಎಸ್‍ಎಫ್ ಶಾಖೆಯ ಅಧ್ಯಕ್ಷ ಅಶ್ರಫ್ ಅಸ್ ಹರಿ, ಕಾರ್ಯದರ್ಶಿ ಪರಾಸ್, ಕೆ. ಯು. ನೌಫಲ್ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!