ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 951ಕ್ಕೆ ಏರಿಕೆ : 625 ಮಂದಿ ಗುಣಮುಖ

August 15, 2020

ಮಡಿಕೇರಿ ಆ. 15 : ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆ ವೇಳೆಗೆ 15 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ.
ಸೋಮವಾರಪೇಟೆ ಅರಣ್ಯ ವಸತಿ ಗೃಹದ 47 ವರ್ಷದ ಪುರುಷ.
ವಿರಾಜಪೇಟೆ ಬಾಳಲೆ ಕೋಣನಕಟ್ಟೆ ದಗ್ಗಳ ಮಾಯಮುಡಿಯ 33 ವರ್ಷದ ಪುರುಷ.
ವಿರಾಜಪೇಟೆ ಸಿದ್ದಾಪುರ 29 ಮತ್ತು 34 ವರ್ಷದ ಪುರುಷ.
ಕುಶಾಲನಗರದ ಆದರ್ಶ ದ್ರಾವಿಡ ಕಾಲೋನಿಯ 23 ವರ್ಷದ ಪುರುಷ.
ಕುಶಾಲನಗರ ಮುಳ್ಳುಸೋಗೆ ಕನ್ನಂಬಾಡಮ್ಮ ದೇವಾಲಯ ಬಳಿಯ 1ನೇ ಬ್ಲಾಕಿನ 38 ವರ್ಷದ ಪುರುಷ.
ಕುಶಾಲನಗರ ವೆಂಕಟೇಶ್ವರ ಲೇಔಟಿನ 52 ವರ್ಷದ ಪುರುಷ.
ವಿರಾಜಪೇಟೆ ಬೆಟ್ಟೋಳಿ ಗ್ರಾಮದ 55 ವರ್ಷದ ವ್ಯಕ್ತಿ.
ವಿರಾಜಪೇಟೆ ಚೆನ್ನಯ್ಯನ ಕೋಟೆಯ ಹೊಲಮಾಳದ 10 ವರ್ಷದ ಬಾಲಕಿ.
ವಿರಾಜಪೇಟೆ ಕುಟ್ಟ ಗ್ರಾಮದ ಬೊಳ್ಳೇರ ಗೇಟಿನ 29 ವರ್ಷದ ಮಹಿಳೆ.
ವಿರಾಜಪೇಟೆ ಗೋಣಿಕೊಪ್ಪದ ಶಾಂತಿನಗರದ 37 ವರ್ಷದ ಮಹಿಳೆ.
ವಿರಾಜಪೇಟೆ ಕಲ್ಲುಬಾಣೆ ಅಂಚೆಯ ಅರ್ಜಿ ಗ್ರಾಮದ 30 ವರ್ಷದ ಪುರುಷ.
ವಿರಾಜಪೇಟೆ ಕಲ್ಲುಬಾಣೆ ಅಂಚೆಯ ಅರ್ಜಿ ಗ್ರಾಮದ 21 ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಆಜಾದ್ ನಗರದ 30 ವರ್ಷದ ಮಹಿಳೆ ಮತ್ತು 3 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 951 ಆಗಿದ್ದು, 625 ಮಂದಿ ಗುಣಮುಖರಾಗಿದ್ದಾರೆ. 314 ಸಕ್ರಿಯ ಪ್ರಕರಣಗಳಿದ್ದು, 12 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 271 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.