ಕೊಡಗು ಪತ್ರಿಕಾ ಭವನ ಟ್ರಸ್ಟ್ ನಿಂದ ಸ್ವಾತಂತ್ರ್ಯ ದಿನಾಚರಣೆ

15/08/2020

ಮಡಿಕೇರಿ ಆ. 15 : ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ 74ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್.ಮನು ಶೆಣೈ ಅವರು ಧ್ವಜಾರೋಹಣ ನೆರವೇರಿದರು. ಈ ಸಂದರ್ಭ ಮಾಜಿ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ. ರಮೇಶ್, ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಟ್ರಸ್ಟಿ ಕೆ.ತಿಮ್ಮಪ್ಪ, ಲಲಿತಾ, ನ್ಯಾಯವಾದಿ ವಿದ್ಯಾಧರ್, ಸಿಬ್ಬಂದಿಗಳಾದ ಯಮುನಾ, ಸವಿತಾ, ರಾಜೇಶ್ ಹಾಗೂ ಫ್ಯಾಮಿಲಿ ಸ್ಟೋರ್‍ನ ಮಾಲಕ ರೆಹಮಾನ್, ಸಫಾ ಬೇಕರಿಯ ಮಾಲಕ ಅಶ್ರಫ್, ರಾಜೇಶ್ವರಿ ಕ್ಯಾಂಟೀನ್ ಮಾಲಕರಾದ ರಾಮಣ್ಣ ಮತ್ತು ಲೀಲಾವತಿ, ಮತ್ತಿತರರು ಹಾಜರಿದ್ದರು.