ಕಕ್ಕೆಹೊಳೆ ಶ್ರೀಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಶ್ರೀಭುವನೇಶ್ವರಿ ಹೋಮ

15/08/2020

ಸೋಮವಾರಪೇಟೆ ಆ.15 : ಪಟ್ಟಣದ ಕಕ್ಕೆಹೊಳೆ ಸಮೀಪದ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಆಟಿ (ರಾಮಾಯಣ ಮಾಸ) ಮಾಸಾಚರಣೆಯ ಅಂಗವಾಗಿ ಶನಿವಾರ ಶ್ರೀ ಭುವನೇಶ್ವರಿ ಹೋಮ ನಡೆಯಿತು.
ಕೋವಿಡ್-19 ಹಿನ್ನೆಲೆಯಲ್ಲಿ ಆಟಿ ಮಾಸಾಚರಣೆಯನ್ನು ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಕೆಲ ಅರ್ಚಕರ ಸಮ್ಮುಖದಲ್ಲಿ ಕಳೆದ ಮೂರು ದಿನಗಳಿಂದ ದುರ್ಗಾದೀಪ ನಮಸ್ಕಾರ ಪೂಜೆ ಸರಳವಾಗಿ ನೆರವೇರಿತ್ತು.
ನಾಲ್ಕನೇ ದಿನವಾದ ಶನಿವಾರ ಬೆಳಗ್ಗೆ ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿಯವರ ಪೌರೋಹಿತ್ಯದಲ್ಲಿ ಗಣಪತಿ ಹೋಮ ಹಾಗು ಶ್ರೀ ಭುವನೇಶ್ವರಿ ಹೋಮ ನಡೆಯಿತು. ಅರ್ಚಕರುಗಳಾದ ಜಗದೀಶ್ ಉಡುಪ, ಹಾನಗಲ್ ಪ್ರಸಾದ್, ಚಂದ್ರಹಾಸ್ ಭಟ್ ಸಹಕರಿಸಿದರು. ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್‍ಕುಮಾರ್, ಕಾರ್ಯದರ್ಶಿ ಎನ್.ಟಿ. ಪ್ರಸನ್ನ ಸೇರಿದಂತೆ ಪದಾಧಿಕಾರಿಗಳು ಇದ್ದರು.