ತಲಕಾವೇರಿ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ

15/08/2020

ಮಡಿಕೇರಿ ಆ.15 : ಗಜಗಿರಿ ಬೆಟ್ಟದಲ್ಲಿ ಭೂಕುಸಿತದಿಂದ ಮೃತಪಟ್ಟ ನಾರಾಯಣಾಚರ್ ಮಕ್ಕಳಾದ ಶಾರದ ಮತ್ತು ನಮಿತಾ ಅವರಿಗೆ ತಲಾ 2.5 ಲಕ್ಷ ರೂ. ಪರಿಹಾರದ ಚೆಕ್‍ನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಶನಿವಾರ ವಿತರಿಸಿದರು. ಹಾಗೆಯೇ ನಾರಾಯಣಾಚಾರ್ ಅವರ ಅಣ್ಣ ಆನಂದ ತೀರ್ಥ ಆಚಾರ್ ಅವರು ಬ್ರಹ್ಮಚಾರಿಯಾದ್ದರಿಂದ ಅವರ ಸಹೋದರಿ ಸುಶೀಲ ಅವರಿಗೆ 5 ಲಕ್ಷ ರೂ ಚೆಕ್‍ನ್ನು ಸಚಿವರು ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಭಾಗಮಂಡಲದಲ್ಲಿ ನಾರಾಯಣಾಚರ್ ಅವರಿಗೆ ಒಳ್ಳೆಯ ಹೆಸರಿತ್ತು. ತಲಕಾವೇರಿಗೆ ಆಗಮಿಸುವ ಭಕ್ತರನ್ನು ಗೌರವ, ಭಕ್ತಿಯಿಂದ ಕಾಣುತ್ತಿದ್ದರು. ಎಂದು ಸಚಿವರು ಸ್ಮರಿಸಿದರು. ನಾರಾಯಣಾಚಾರ್ ಮಕ್ಕಳೊಂದಿಗೆ ಚರ್ಚಿಸಿದರು. ನಾರಾಯಣಾಚರ್ ಮಕ್ಕಳಿಗೆ ಶಾಸಕರಾದ ಕೆ.ಜಿ ಬೋಪಯ್ಯ ಮತ್ತು ಸಂಸದರಾದ ಪ್ರತಾಪ್ ಸಿಂಹ, ಅವರು ಹಲವು ಸಲಹೆ, ಮಾರ್ಗದರ್ಶನ ಮಾಡಿದರು.
ವಿಧಾನಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಕ್ಷಮಾ ಮಿಶ್ರಾ, ತಹಶೀಲ್ದಾರ್ ಮಹೇಶ್ ಇತರರು ಹಾಜರಿದ್ದರು.