ಮಡಿಕೇರಿ ವರ್ಕ್‍ಶಾಪ್ ಕಾರ್ಮಿಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ

15/08/2020

ಮಡಿಕೇರಿ ಆ.15 : ನಗರದ ಕೈಗಾರಿಕಾ ಬಡಾವಣೆಯ ವರ್ಕ್‍ಶಾಪ್ ಕಾರ್ಮಿಕರ ಸಂಘದ ವತಿಯಿಂದ 74ನೇ ಸ್ವಾತಂತ್ರ್ಯ ದಿನವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.
ಸಂಘದ ಹಿರಿಯ ಸದಸ್ಯ ಎಂ.ಎಸ್.ವೆಂಕಟರಮಣ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪಿ.ರಮೇಶ್, ಹಿರಿಯ ಸದಸ್ಯರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.