Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
9:27 PM Sunday 17-October 2021

ಕುಟ್ಟದಲ್ಲಿ ವಿಚಾರ ಸಂಕಿರಣ : ಆರ್ಥಿಕ ನೆರವು ನೀಡಲು ಹಾಲು ಉತ್ಪಾದನೆ ಸಹಕಾರಿ : ಶ್ರೀಬೋಧ ಸ್ವರೂಪಾನಂದಾಜೀ ಅಭಿಪ್ರಾಯ

17/08/2020

ಮಡಿಕೇರಿ ಆ.17 : ಸಂಕಷ್ಟದ ಪರಿಸ್ಥಿತಿಯ ಈ ದಿನಗಳಲ್ಲಿ ಹೈನುಗಾರಿಕೆ ಮತ್ತು ಹಾಲು ಉತ್ಪಾದನೆಯಂತಹ ಪರ್ಯಾಯ ಕಸುಬುಗಳು ರೈತರಿಗೆ ಆರ್ಥಿಕ ನೆರವು ನೀಡಲು ಸಹಕಾರಿಯಾಗಿದೆ ಎಂದು ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಶ್ರೀಬೋಧ ಸ್ವರೂಪಾನಂದಾಜೀ ಮಹಾರಾಜ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಕುಟ್ಟ ಗ್ರಾಮದ ಅನುಗ್ರಹ ಹೆಚ್ ಪಿ ಪೆಟ್ರೋಲಿಯಂ ಬಳಗ ಹಾಗೂ ಕಾಮತ್ ಗ್ರೂಪ್ ಸಹಕಾರದೊಂದಿಗೆ “ಹಾಲು ಉತ್ಪಾದನೆ ಮತ್ತು ಮಾರುಕಟ್ಟೆ” ಕುರಿತು ನಡೆದ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಾಕೃತಿಕ ವಿಕೋಪ ಹಾಗೂ ಕೋವಿಡ್ ರೋಗದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತಾಪಿ ವರ್ಗ ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿದೆ. ಆದ್ದರಿಂದ ಪರ್ಯಾಯವಾಗಿ ಹಸು ಸಾಕಾಣಿಕೆ ಮತ್ತು ಹಾಲು ಉತ್ಪಾದನೆಯಂತಹ ಮಾರ್ಗಗಳನ್ನು ಕಂಡುಕೊಳ್ಳಬೇಕೆಂದು ಸ್ವಾಮೀಜಿ ಸಲಹೆ ನೀಡಿದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅಮ್ಮತಿನಾಡು ಹಾಲು ಉತ್ಪಾದಕರ ಸಂಘದ ನಿಯೋಜಿತ ಅಧ್ಯಕ್ಷ ತುಷಾರ್ ಕುಲಕರ್ಣಿ ರೈತರು ತಮ್ಮ ದೈನಂದಿನ ಕೃಷಿ ಕಾರ್ಯದೊಂದಿಗೆ ಹೈನುಗಾರಿಕೆಯನ್ನು ಕೂಡ ಉಪ ಕಸುಬಾಗಿ ಮಾಡಿಕೊಳ್ಳಬೇಕು. ಹಾಲು ಮಾರಾಟ, ಹಸುವಿನ ಸೆಗಣಿ ಮತ್ತು ಗಂಜಲ ಮಾರಾಟದಿಂದ ಹೆಚ್ಚಿನ ಆದಾಯ ಗಳಿಸಬಹುದು ಎಂದರು.
ಕುಟ್ಟ ಸುತ್ತಮುತ್ತಲಿನ ಗ್ರಾಮಗಳ ರೈತರು ದಿನಕ್ಕೆ 500 ಲೀಟರ್ ಹಾಲು ಉತ್ಪಾದನೆ ಮಾಡಿದರೆ ಹಾಲನ್ನು ಸಾಗಿಸುವ ವ್ಯವಸ್ಥೆ ಮಾಡಲು ಸಾಧ್ಯವಿದೆ ಎಂದರು. ಸರಕಾರದಿಂದ ಹೈನುಗಾರಿಕೆಗೆ ಪ್ರೋತ್ಸಾಹ ಧನ, ಸಾಲ, ವಿಮೆ ವ್ಯವಸ್ಥೆಗಳಿದ್ದು, ಪ್ರಸ್ತಾವನೆಯನ್ನು ಸಲ್ಲಿಸಬೇಕಾಗುತ್ತದೆ. ಅಮ್ಮತ್ತಿ ನಾಡಿನಲ್ಲಿ ಆರಂಭದಲ್ಲಿ ದಿನಕ್ಕೆ ಕೇವಲ 40 ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಆದರೆ ಮೂರೇ ತಿಂಗಳಿನಲ್ಲಿ 500 ಲೀಟರ್ ಹಾಲು ಸಂಗ್ರಹವಾಗಲು ಆರಂಭವಾಯಿತು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಪರಿಸ್ಥಿತಿ ಹಿಂದಿನಂತ್ತಿಲ್ಲ, ಈಗ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ರೈತರು ಹಾಲು ಉತ್ಪಾದನೆಗೆ ಮುಂದೆ ಬಂದರೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಮತ್ ಗ್ರೂಪ್ ನ ಪ್ರಮುಖ ಕೇಶವ ಕಾಮತ್ ಕುಟ್ಟ ಬಳಿಯ ಕೋತೂರು ಗ್ರಾಮದ ಯುವಕರುಗಳಾದ ಮುಕ್ಕಾಟೀರ ಹರೀಶ್ ಹಾಗೂ ರೋಷನ್ ಅವರುಗಳು 160 ಲೀ ಹಾಲು ಉತ್ಪಾದಿಸಿ ಮೈಸೂರು ಜಿಲ್ಲೆಯ ಅಳ್ಳೂರು ಬಳಿಯ ಮಾಲಂಗಿ ಹಾಲು ಸಂಗ್ರಹ ಘಟಕಕ್ಕೆ ಬೈಕ್ ಮೂಲಕ ಸಾಗಿಸಿ ಆದಾಯ ಗಳಿಸುತ್ತಿದ್ದಾರೆ. ಇದೇ ಮಾದರಿಯಲ್ಲಿ ಎಲ್ಲಾ ಯುವಕರು ಹೈನುಗಾರಿಕೆಯಲ್ಲಿ ತೊಡಗಿಕೊಂಡು ಲಾಭ ಗಳಿಸಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಮಸ್ಥರು ಕುಟ್ಟ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಮುಕ್ಕಾಟೀರ ನವೀನ್ ಅಯ್ಯಪ್ಪ ಮತ್ತು ಚಂದನ್ ಕಾಮತ್ ಅವರಿಗೆ ಗ್ರಾಮ ಪಂಚಾಯತಿಯೊಂದಿಗೆ ವ್ಯವಹರಿಸಿ ಗ್ರಾಮಸಭೆ ನಡೆಸುವ ಜವಾಬ್ದಾರಿ ನೀಡಿದರು.
ಕುಟ್ಟ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಕೃಷಿಕರಾದ ಸೂರತ್ ಸುಬ್ಬಯ್ಯ, ಚಕ್ಕೇರ ದೇವಯ್ಯ, ಚಕ್ಕೇರ ಗಣಪತಿ, ಗಣೇಶ್ ಶೆಟ್ಟಿ, ಮುತ್ತುಸ್ವಾಮಿ, ಕಳ್ಳಂಗಡ ಗೌತಮ್, ಕುಟ್ಟ ಆಟೋ ಚಾಲಕರ ಸಂಘದ ಅಧ್ಯಕ್ಷ ಸುರೇಶ್, ಸಿಂಕೋನ ರಾಜ, ಕಾಮತ್ ಗ್ರೂಪ್‍ನ ಪ್ರಮೋದ್ ಕಾಮತ್, ಶಾಂತಾರಾಮ್ ಕಾಮತ್, ಸಂಧ್ಯಾ ಕಾಮತ್, ಶ್ರೀನಾಥ್ ಭಟ್, ಸಂಗೀತಾ, ಪ್ರತಿಕ್ಷಾ, ಪ್ರಜ್ಞಾ ಮತ್ತಿತರರು ಹಾಜರಿದ್ದರು.