ಕೊಡಗಿನಲ್ಲಿ ‘ಆರೋಗ್ಯ ಹಸ್ತ’ ಕಾರ್ಯಕ್ರಮಕ್ಕೆ ಚಾಲನೆ

17/08/2020

ಮಡಿಕೇರಿ ಆ. 17 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿರಾಜಪೇಟೆ ಬ್ಲಾಕ್ ಮತ್ತು ಪೊನ್ನಂಪೇಟೆ ಬ್ಲಾಕ್ ನ ಕೋರೋನಾ ಸೇನಾನಿಗಳಿಗೆ ಕೊಡಗು ಜಿಲ್ಲಾಧ್ಯಕ್ಷ ಕೆ. ಕೆ ಮಂಜುನಾಥ್ ‘ಆರೋಗ್ಯ ಹಸ್ತ ‘ ಯೋಜನೆಯ ಕಿಟ್ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿರಾಜಪೇಟೆಯ ಗಣಪತಿ ಆರ್ಕೇಡ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ. ಕೆ ಮಂಜುನಾಥ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಎಂದಿಗೂ ಜನಪರ ಕಾಳಜಿ ಹೊಂದಿದ್ದು, ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತದೆ, ಕೋರೋನಾ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ,ಇದರಿಂದ ಸಾವಿರಾರು ಕೋಟಿ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರದಿದ್ದರೂ ಕೆಪಿಸಿಸಿಯ ನೂತನ ಸಾರಥಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯದ ರೈತರ ಪರ, ವಲಸೆ ಕಾರ್ಮಿಕರ ಪರ, ಬಡವರ ಪರ ಕೆಲಸ ಮಾಡುತ್ತಿದ್ದು ರಾಜ್ಯದ ಹಲವು ರೈತರ ಬೆಳೆಗಳನ್ನು ತಾವೇ ಖರೀದಿಸಿ ಸಹಾಯ ಮಾಡಿದರು.
ನಾಡಿನ ಜನತೆಗೆ ಕೋರೋನಾ ವಿರುದ್ಧ ಹೋರಾಡಲು ಜನತೆಗೆ ಆತ್ಮ ಸ್ಥೈರ್ಯವನ್ನು ತುಂಬಲು ಆರೋಗ್ಯ ಹಸ್ತ ಎಂಬ ಕಾರ್ಯಕ್ರಮ ಜಾರಿಗೊಳಿಸಿದ್ದು, ಪ್ರತಿ ಗ್ರಾಮ ಪಂಚಾಯಿತಿ ಸಾಮಾಜಿಕ ಜಾಲತಾಣದ ಸಂಚಾಲಕರನ್ನು ಕೋರೋನಾ ವಾರಿಯರ್ಸಗಳಾಗಿ ಮಾಡಿ ಅವರಿಗೆ 1ಲಕ್ಷ ರೊಗಳ ಇನ್ಸೂರೆನ್ಸ್ ನೀಡಿ ಅವರಿಗೆ ಕೋರೋನಾ ಪರೀಕ್ಷಾ ಕಿಟ್ ನೀಡಿ ಅದರ ಮೂಲಕ ಪ್ರತಿ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ಆತ್ಮಸ್ಥೈರ್ಯ ತುಂಬುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದರು.
ಜಿಲ್ಲೆಯ ಎಲ್ಲಾ ನಾಯಕರು ಜನಪ್ರತಿನಿಧಿಗಳು ಕೋರೋನಾ ಸೇನಾನಿಗಳ ಒಡಗೂಡಿ ಈ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕಾಗಿ ಮನವಿ ಮಾಡಿದರು.
ಕೆಪಿಸಿಸಿ ಡಾಕ್ಟರ್ ಸೆಲ್ ನ ಸದಸ್ಯೆ ಡಾ. ಜ್ಯೋತಿರವರು ಕಿಟ್ ಹೇಗೆ ಬಳಸುವುದು ಎಂದು ವಿವರಣೆ ನೀಡಿದರು.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ನವೀನ್, ಕೆಪಿಸಿಸಿ ಉಸ್ತುವಾರಿಗಳಾದ ಪಿ. ರಾಜು ಪ್ರದೀಪ್ ರೈ, ಕಾಂಗ್ರೆಸ್ ಪಕ್ಷದ ಕೆಪಿಸಿಸಿ ವಕ್ತಾರರಾದ ಬ್ರಿಜೇಶ್ ಕಾಳಪ್ಪ,ವಿಧಾನಸಭಾ ಕ್ಷೇತ್ರದ ಸದಸ್ಯಾದ ವೀಣಾ ಅಚ್ಚಯ್ಯ, ಅರುಣ್ ಮಾಚಯ್ಯ, ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.