ಸಿಎನ್‍ಸಿ ಯಿಂದ 74ನೇ ಸ್ವಾತಂತ್ರ್ಯೋತ್ಸವ ಆಚರಣೆ

17/08/2020

ಮಡಿಕೇರಿ ಆ. 17 : ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ) ಯಿಂದ 74ನೇ ಸ್ವಾತಂತ್ರ್ಯೋತ್ಸವವನ್ನು ನಗರದ ಮಿಡ್ಲ್ ಗ್ರೌಂಡ್ಸ್ ಮಂದ್ ನಲ್ಲಿ ಅರ್ಥಪೂರ್ಣವಾಗಿ ಆಚರಿಸಿದರು.
ಸಿ.ಎನ್.ಸಿಯ ಅಧ್ಯಕ್ಷ ಎನ್.ಯು ನಾಚಪ್ಪ ಧಜಾರೋಹಣ ನೇರವೇರಿಸಿದರು. ನಂತರ ಮಾತನಾಡಿದ ಅವರು ಕೊಡವ ಬುಡಕಟ್ಟು ಕುಲ ಆದಮ್ಯ ರಾಷ್ಟ್ರೀಯತೆ ಮತ್ತು ಅಪ್ರತಿಮ ದೇಶಭಕ್ತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದು ನಮ್ಮ ಭಾರತರ ದೇಶವು ಸ್ವಾತಂತ್ರ್ಯವಾಗುವಾಗ 1947 ರಲ್ಲಿ ಕೊಡವರ ಜನ್ಮಭೂಮಿ ಕೊಡಗು ಕೂಡ ಪ್ರತ್ಯೇಕ ಪ್ರಾಂತದ ಹೆಸರಿನಕಲ್ಲಿ ಸ್ವತಂತ್ರ್ಯವಾಗಿತ್ತು.
ಭಾರತ ಏಕೀಕರಣದ ರುವಾರಿ, ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರು ಭಾರತದ ಸುಮಾರು 552 ಕ್ಕೂ ಹೆಚ್ಚು ರಾಜಸತ್ತೆ ಸಂಸ್ಥಾನಗಳನ್ನು (565 ರಷ್ಟಿದ್ದ ರಾಜಸಂಸ್ಥಾನಗಳ ಪೈಕಿ ಸುಮಾರು 13 ರಷ್ಟು ದೇಶ ವಿಭಜನೆಯಾದಾಗ ಪಾಕಿಸ್ತಾನದೊಂದಿಗೆ ಸೇರಿಹೋಯಿತು) ಭಾರತ ಒಕ್ಕೂಟದೊಳಗೆ ವಿಲೀನಗೊಳಿಸುವ ಸಂದರ್ಭ ಕೊಡವ ನೆಲ ಕೊಡಗನ್ನು ಪ್ರತ್ಯೇಕ ಪ್ರಾಂತವಾಗಿ ಮುಂದುವರೆಸಿದ್ದು ಮಾತ್ರವಲ್ಲದೇ ಖುದ್ದಾಗಿ ಸರ್ದಾರ್ ಪಟೇಲ್ರು ಪಾರ್ಲಿಮೆಂಟಿನಲ್ಲಿ ಭಾರತದ ಏಕೈಕ “ರಾಮರಾಜ್ಯ” ಕೊಡಗೆಂಬ ಪ್ರಶಂಸನೀಯ ಹೆಗ್ಗಳಿಕೆಯ ಮಾತನಾಡಿದ್ದು, ಈ ಬಗ್ಗೆ 1949 ರ ಪಾರ್ಲಿಮೆಂಟಿನ ನಡಾವಳಿಕೆಯಲ್ಲಿ ದಾಖಲಾಗಿದೆ ಎಂದರು.

ಇದೀಗ ಸ್ವಾತಂತ್ರ್ಯ ದಿನಾಚರಣೆಯಂದು ಕೊಡವ ಲ್ಯಾಂಡ್ ಸ್ವಾತಂತ್ರ್ಯಾನ್ವೇಷಣೆಯತ್ತ ಪಯಣಿಸುವ ಹೆಜ್ಜೆಯ ಮೂಲಕ ಸಂವಿಧಾನಿಕವಾಗಿ ಸ್ವಾಯತ್ತ ಕೊಡವ ನೆಲೆ ಪಡೆದುಕೊಳ್ಳುವ ದೃಢಸಂಕಲ್ಪ ತೊಟ್ಟಿದೆ ಎಂದರು.
ಇದೇ ವೇಳೆ ಭಾರತದ ಅಖಂಡತೆಗೆ ಕೊಡವ ಬುಡಕಟ್ಟಿನ ನಿಷ್ಠೆ & ಅಚಲ ದೇಶಪ್ರೇಮ ಹಾಗೂ ರಾಷ್ಟ್ರೀಯತೆಯೂ ಬಂಡೆಕಲ್ಲಿನಂತೆ ಸಾಕ್ಷೀಕರಿಸುತ್ತಿದೆ. ಭಾರತ ದೇಶವು ಜಗತ್ತಿನಲ್ಲೇ ಬಲಿಷ್ಠ ಮತ್ತು ಸಮೃದ್ದ ರಾಷ್ಟ್ರವಾಗಿ ಹೊರಹೊಮ್ಮ ಬೇಕು ಮತ್ತು ಕೊಡವ ನೆಲ ಸ್ವಾತಂತ್ರಾನ್ವೇಷಣೆ ಸಹಕಾರಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಕಲಿಯಂಡ ಮೀನಾ ಪ್ರಕಾಶ್, ಚಂಬಂಡ ಜನತ್ ಕುಮಾರ್, ನಂದಿನೆರವಂಡ ಅಪ್ಪಯ್ಯ, ನಂದಿನೆರವಂಡ ಅಯ್ಯಣ್ಣ, ಮನೋಟಿರ ಚಿಣ್ಣಪ್ಪ, ಪುಟ್ಟಿಚಂಡ ಡಾನ್ ದೇವಯ್ಯ ಭಾಗವಹಿಸಿದ್ದರು.