ಕೊಡಗು ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಯಿಂದ ಸ್ವಾತಂತ್ರ್ಯ ದಿನಾಚರಣೆ

August 17, 2020

ಮಡಿಕೇರಿ ಆ. 17 : ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಆಶ್ರಯದಲ್ಲಿ “ಸ್ವಾತಂತ್ರ್ಯ ಸರ್ವರಿಗೂ ಸಮಾನವಾಗಿರಲಿ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ಆನ್ಲೈನ್ ಕಾರ್ಯಕ್ರಮದ ಮೂಲಕ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಕೆ.ಎಸ್.ಎಸ್ .ಎಫ್ ಕೊಡಗು ಜಿಲ್ಲಾ ಉಪಾಧ್ಯಕ್ಷರಾದ ಅಶ್ರಫ್ ಮಿಸ್ಬಾಹಿ ನೆರವೇರಿಸಿದರು
ಮುಖ್ಯ ಭಾಷಣಕಾರರಾಗಿ ಆಗಮಿಸಿದ ಸುನ್ನೀ ಸಂದೇಶ ಮಾಸ ಪತ್ರಿಕೆಯ ಸಂಪಾದಕರಾದ ಕೆ.ಎಸ್ ಹೈದರ್ ದಾರಿಮಿ ಮಾತನಾಡಿದರು.
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೋಚಕ ಕದನಗಳನ್ನ ವಿವರಿಸಿದರು. ಭಾರತದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಮರ ಕೊಡುಗೆಗಳು,ವೀರಸೇನಾನಿಗಳ ತ್ಯಾಗ-ಬಲಿದಾನಗಳ ಚರಿತ್ರೆಗಳು, ಇತಿಹಾಸದ ಪುಟಗಳು ತಿರುವಿದಾಗ ಲಭ್ಯವಾಗುವ ಮೈನವಿರೇಳಿಸುವ ದೃಶ್ಯಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು.
ದುರಾದೃಷ್ಟವಶಾತ್ ಈ ಚರಿತ್ರೆಗಳು ಪೂರ್ವಗ್ರಹ ಪೀಡಿತ ಶಕ್ತಿಗಳಿಂದಾಗಿ ಇತಿಹಾಸದ ಪುಟಗಳಿಂದ ಕಣ್ಮರೆಯಾಗುತ್ತಿವೆ ಎಂದು ಹೈದರ್ ದಾರಿಮಿ‌ ಬೇಸರ ವ್ಯಕ್ತಪಡಿಸಿದರು.
ಭಾರತೀಯರಾದ ನಮ್ಮ ಮೇಲೆ, ಮುಂದಿನ ಪೀಳಿಗೆಗೆ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸಗಳನ್ನು ಉಳಿಸಿಕೊಂಡು ಹೋಗುವ ಬಹುದೊಡ್ಡ ಜವಾಬ್ದಾರಿಯಿದೆ ಹಾಗೂ ರಾಷ್ಟ್ರಪ್ರೇಮ ಪ್ರತಿಯೊಬ್ಬರ ಮನ, ಮನೆಗಳಲ್ಲೂ ಉದಯವಾಗಬೇಕೆಂದು ಕರೆ ಹೈದರ್ ಮಿಸ್ಬಾಹಿ ಕರೆ ನೀಡಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಎಸ್ ಕೆ ಎಸ್ ಎಸ್ ಎಫ್ ಕೊಡಗು ಜಿಲ್ಲಾಧ್ಯಕ್ಷರಾದ, ತಮ್ಲೀಕ್ ದಾರಿಮಿ ಸಾಮಾಜಿಕ ಜಾಲತಾಣಗಳನ್ನು ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಎಚ್ಚರದಿಂದ ಉಪಯೋಗಿಸಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ ಕೊಡಗು ಅಧ್ಯಕ್ಷರಾದ ಹುಸೈನ್ ಫೈಝಿ ವಹಿಸಿದ್ದರು. ಅಬ್ದುಲ್ ರಝಾಕ್ ಫೈಝಿ, ಶಿಹಾಬ್ ಆಲುಂಗಲ್ ಕ ಮಾಧ್ಯಮ ವಿಭಾಗ ಅಧ್ಯಕ್ಷರಾದ ಶಫೀಕ್ ನೆಲ್ಲಿಯಹುದಿಕೇರಿ ಹಾಗೂ ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ ಕೊಡಗು ಸಮಿತಿಯ ನಾಯಕರುಗಳು, ಸದಸ್ಯರುಗಳು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜೈನುದ್ದೀನ್ ಉಸ್ತಾದ್ ಪ್ರಾರ್ಥನೆ ನೆರವೇರಿಸಿ, ಅಬ್ದುಲ್ ರಜಾಕ್ ಬಜೆಗುಂಡಿ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ವಾಗತ ಕೋರಿದರು. ಅಬ್ದುಲ್ ಗಫೂರ್ ವಂದಿಸಿ, ಯಾಹ್ಯಾ ಕೊಡ್ಲಿಪೇಟೆ ಕಾರ್ಯಕ್ರಮ ನಿರೂಪಿಸಿದರು.