ಶಿಕ್ಷಣ ಇಲಾಖೆಯಿಂದ ಸಾಧಕ ವಿದ್ಯಾರ್ಥಿ ಜಗತ್ ಪೂವಯ್ಯ ಗೆ ಸನ್ಮಾನ

17/08/2020

ಮಡಿಕೇರಿ ಆ. 17 : ಹತ್ತನೇ ತರಗತಿ ಪರೀಕ್ಷೆಯಲ್ಲಿ 625ಕ್ಕೆ 620 ಅಂಕ ಪಡೆದು ಜಿಲ್ಲೆಗೆ ಅತಿ ಹೆಚ್ಚು ಅಂಕಗಳಿಸಿದ ಕುಶಾಲನಗರದ ಫಾತಿಮ ಪ್ರೌಢಶಾಲೆಯ ವಿದ್ಯಾರ್ಥಿ ಜಗತ್ ಪೂವಯ್ಯಗೆ ಶಿಕ್ಷಣ ಇಲಾಖೆ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಕೆ. ಪಾಂಡು, ಕೊಡಗು ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ. ಸೋಮಶೇಖರ, ತಾಲ್ಲೂಕು ಕ್ರೀಡಾ ಅಧೀಕ್ಷಕ ಸದಾಶಿವ ಪಲ್ಲೆದ್, ಪಾತಿಮಾ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಹಾಗೂ ಸಹಶಿಕ್ಷಕರು, ಪೋಷಕರು ಹಾಜರಿದ್ದರು.