ಶಿಕ್ಷಣ ಇಲಾಖೆಯಿಂದ ಎಂ.ಡಿ. ವಿಜಯ್‍ಗೆ ಸನ್ಮಾನ

17/08/2020

ಮಡಿಕೇರಿ ಆ. 17 : ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 625ಕ್ಕೆ 618 ಅಂಕ ಪಡೆದು ಜಿಲ್ಲೆಗೆ ಎರಡನೇ ಸ್ಥಾನ ಪಡೆದ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಎಂ.ಡಿ. ವಿಜಯ್‍ಗೆ ಶಿಕ್ಷಣ ಇಲಾಖೆ ಪರವಾಗಿ ಸನ್ಮಾನ ಮಾಡಲಾಯಿತು.
ಈ ಸಂದರ್ಭ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಕೆ. ಪಾಂಡು, ತಾಲ್ಲೂಕು ಕ್ರೀಡಾ ಅಧೀಕ್ಷಕ ಸದಾಶಿವ ಪಲ್ಲೇದ್, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಪ್ರಕಾಶ್, ಸಹ ಶಿಕ್ಷಕ ದೊಡ್ಡಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ರಾಜೇಶ್, ಚಿದಾನಂದ್ ಹಾಗೂ ಪೋಷಕರು ಪಾಲ್ಗೊಂಡಿದ್ದರು.