ಸೋಮವಾರಪೇಟೆ ರೋಟರಿ ಕ್ಲಬ್ ನಿಂದ ವನಮಹೋತ್ಸವ ಆಚರಣೆ

17/08/2020

ಮಡಿಕೇರಿ ಆ. 17 : ಸೋಮವಾರಪೇಟೆ ರೋಟರಿ ಕ್ಲಬ್ ಹಾಗೂ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜಿನ ರೋಟರ್ಯಾಕ್ಟ್ ವತಿಯಿಂದ ಕಾಲೇಜು ಆವರಣದಲ್ಲಿ 100 ಗಿಡಗಳನ್ನು ನೆಡುವ ಮೂಲಕ ಸೋಮವಾರ ವನಮಹೋತ್ಸವ ಆಚರಿಸಲಾಯಿತು.
ಕ್ಲಬ್‍ನ ಅಧ್ಯಕ್ಷ ಎಂ.ಡಿ.ಲಿಖಿತ್ ಗಿಡ ನೆಡುವ ಮೂಲಕ ಚಾಲನೆ ನೀಡಿ, ಸೋಮವಾರಪೇಟೆ ಸುತ್ತಲಿನ ಖಾಲಿ ಜಾಗದಲ್ಲಿ 6 ಸಾವಿರ ಗಿಡಗಳನ್ನು ನೆಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭ ರೋಟರಿ ಜಿಲ್ಲಾ ಸಹಾಯಕ ರಾಜ್ಯಪಾಲ ಪಿ.ಕೆ.ರವಿ, ವಲಯ ಸೇನಾನಿ ರವಿಶಂಕರ್, ಕಾಲೇಜಿನ ವ್ಯವಸ್ಥಾಪಕ ಫಾದರ್ ಎಂ.ರಾಯಪ್ಪ, ಕ್ಲಬ್‍ನ ಮಾಜಿ ಅಧ್ಯಕ್ಷರಾದ ಎಚ್.ಸಿ.ನಾಗೇಶ್, ಡಾ.ರಾಕೇಶ್, ಡಿ.ಪಿ.ರಮೇಶ್, ಕಾರ್ಯದರ್ಶಿ ಕೆ.ಡಿ.ಜೀವನ್ ಕುಮಾರ್ ಇದ್ದರು.