ಜೇಸಿ ಸಂಸ್ಥೆಯಿಂದ ಆನೆಕೆರೆಯಲ್ಲಿ ಸ್ಪಚ್ಚತಾ ಕಾರ್ಯ
17/08/2020

ಸೋಮವಾರಪೇಟೆ ಆ. 17 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜೇಸಿ ಸಂಸ್ಥೆಯ ವತಿಯಿಂದ ಪಟ್ಟಣದ ಆನೆಕೆರೆ ಸಮೀಪದ ಅರಳಿಕಟ್ಟೆಯ ಸ್ವಚ್ಛತೆ ಕಾರ್ಯ ನಡೆಯಿತು. ಇದರೊಂದಿಗೆ ಅರಳಿ ಮರದ ವಿಶೇಷತೆಯನ್ನು ಬಿಂಬಿಸುವ ಮಾಹಿತಿ ಫಲಕವನ್ನು ಅಳವಡಿಸಲಾಯಿತು.
ಈ ಸಂದರ್ಭ ಮಾತನಾಡಿದ ಯೋಜನಾಧಿಕಾರಿ ವೈ. ಪ್ರಕಾಶ್, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಡಿ ತಾಲೂಕಿನಾದ್ಯಂತ 70 ದೇವಾಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜೇಸಿ ಅಧ್ಯಕ್ಷೆ ಉಷಾರಾಣಿ ಗುರುಪ್ರಸಾದ್, ಒಕ್ಕೂಟದ ಅಧ್ಯಕ್ಷೆ ದಿವ್ಯ ಹಾಲಪ್ಪ, ಪ.ಪಂ. ಸದಸ್ಯರಾದ ಪಿ.ಕೆ. ಚಂದ್ರು, ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ, ಸೇವಾ ಪ್ರತಿನಿಧಿ ಮೀನಾ ಮಂಜುನಾಥ್ ಮತ್ತಿತರರು ಇದ್ದರು.
