Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
4:59 AM Friday 22-October 2021

ಕೊಡಗು ಸುನ್ನಿ ವೆಲ್ಫೇರ್ ಅಸ್ಸೋಸಿಯೇಷನ್ ಬೆಂಗಳೂರು ವಲಯ ಅಸ್ತಿತ್ವಕ್ಕೆ

17/08/2020

ಮಡಿಕೇರಿ ಆ. 17 : ಕೊಡಗು ಜಿಲ್ಲೆಯವರ ಹೆಮ್ಮೆಯ ಸಂಘಟನೆಯಾದ ಕೊಡಗು ಸುನ್ನಿ ವೆಲ್ಫೇರ್ ಅಸ್ಸೋಶಿಯೇಷನ್ ಬೆಂಗಳೂರಿನಲ್ಲಿ ನೂತನ ವಲಯ ಅಸ್ತಿತ್ವಕ್ಕೆ ಬಂದಿದೆ.
ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆಯನ್ನು ಹಂಸ ಉಸ್ತಾದ್ ಚೋಕಂಡಳ್ಳಿ ಪ್ರಾರ್ಥನೆ ನೆರವೇರಿಸುವುದರ ಮೂಲಕ‌ ಆರಂಭಿಸಿದರು. ಕರ್ನಾಟಕ ರಾಜ್ಯ ಎಸ್.ವೈ.ಎಸ್. ಮೀಡಿಯಾ ಕಾರ್ಯದರ್ಶಿ ಹಫೀಳ್ ಸಅದಿ ಕೊಳಕ್ಕೇರಿ ರವರ ಅಧ್ಯಕ್ಷತೆಯಲ್ಲಿ ಆನ್ ಲೈನ್ ಸಭೆ ನಡೆಯಿತು. ಸಭೆಯನ್ನು ಬೆಂಗಳೂರು ಜಿಲ್ಲಾ ಅಧ್ಯಕ್ಷರಾದ ಬಶೀರ್ ಸಅದಿ ಉದ್ಘಾಟಿಸಿದರು.

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕ್ಕರೆ ಮಾತನಾಡಿ ಕೊಡಗು ಜಿಲ್ಲೆಯ ಸುನ್ನಿ ಸಂಘ ಕುಟುಂಬ ಮತ್ತು ಸಂಸ್ಥೆಗಳನ್ನು, ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಂತ್ವನ ಕಾರ್ಯ ಚಟುವಟಿಕೆಗಳನ್ನು ಸಕ್ರೀಯವಾಗಿಸುವ ಸಲುವಾಗಿ ಮತ್ತು ಕಷ್ಟ ಅನುಭವಿಸಿತ್ತಿರುವ ಅನಿವಾಸಿ ಕೊಡಗಿನವರಿಗೆ ಸಹಾಯ-ಸಹಕಾರಗಳನ್ನು ನೀಡುವ ಉದ್ದೇಶದಿಂದ ಮಾತ್ರ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ನ್ನು ರಚಿಸಲಾಗಿದೆ.
ಹೊರತು ಯಾವುದೇ ಇತರ ಸಂಘಟನೆಗಳ ವಿರುಧ್ದದ ಶಕ್ತಿಯಾಗಿ ಪೈಪೋಟಿ ನಡೆಸುವ ಉದ್ದೇಶದಿಂದ ಪ್ರಸ್ತುತ ಸಂಘಟನೆ ಕಾರ್ಯನಿರ್ವಹಿಸುತ್ತಿಲ್ಲ. ಸಂಘಟನೆಯ ಸರ್ವತೋಮುಖ ಬೆಳವಣಿಗೆಗೆ ಎಲ್ಲರೂ ಸಹರಿಸಿ ಎಂದು ಆಬಿದ್ ಕಂಡಕರೆ ಮನವಿ ಮಾಡಿದರು.
ನೂತನ ಪದಾಧಿಕಾರಿಗಳನ್ನು ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ಅಧ್ಯಕ್ಷರಾದ ಅಲಿ ಮುಸ್ಲಿಯಾರ್ ಬಹ್ರೈನ್ ಘೋಷಿಸಿದರು.

ನೂತನ ಅಧ್ಯಕ್ಷರಾಗಿ ಬಷೀರ್ ಸಹದಿ ಚಾಮೆಯಾಲ್,ಉಪಾಧ್ಯಕ್ಷರಾಗಿ ಹಸೈನಾರ್ ಸಖಾಫಿ ಕೊಂಡಂಗೇರಿ, ಹಮೀದ್ ಆರ್.ಟಿ ನಗರ ಹಾಗೂ ಹುಸೈನ್ ಸಖಾಫಿ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಹಮೀದ್ ಕಬಡಕ್ಕೇರಿ, ಸಹಕಾರ್ಯದರ್ಶಿಗಾಗಿ ಮಜೀದ್ ಮುಸ್ಲಿಯಾರ್, ಅಷ್ರಫ್ ಆರ್.ಎಂ.ಸಿ, ಅಜೀಜ್ ಚಾಮೆಯಾಲ್ ಆಯ್ಕೆಯಾಗಿದ್ದಾರೆ.
ಕೋಶಾಧಿಕಾರಿಯಾಗಿ ಹಂಸ ಕೊಟ್ಟಮುಡಿ, ಕೋಡಿನೇಟರ್ ಆಗಿ ತಾಜುದ್ದೀನ್ ಫಾಳಿಲಿ ಆಯ್ಕೆಯಾದರು.ರಿಲೀಫ್ ವಿಂಗ್ ಸದಸ್ಯರಾಗಿ ಹಂಸ ಸಖಾಫಿ,ಸುಬೈರ್ ಮುಸ್ಲಿಯಾರ್, ಮೀಡಿಯಾ ವಿಂಗ್ ಸದಸ್ಯರಾಗಿ ರಿಯಾಸ್ ಮಾರ್ತಳ್ಳಿ,ನಾಸರ್ ಕುಂಜಿಲ ,ಸಯೀದ್ ಎಮ್ಮೆಮಾಡು ಮತ್ತು ಹತ್ತು ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಆನ್ ಲೈನ್ ಕಾರ್ಯಕ್ರಮದಲ್ಲಿ ಸಿದ್ದೀಖ್ ಝುಹ್ರಿ ಅಯ್ಯಂಗೇರಿ , ಹಸೈನಾರ್ ಸಖಾಫಿ ಕೊಂಡಂಗೇರಿ ಖಾಸಿಂ ಸಖಾಫಿ ಕೊಂಡಂಗೇರಿ, ಹಮೀದ್ ಕಬಡಕ್ಕೇರಿ ಇದ್ದರು.
ತಾಜುದ್ದೀನ್ ಫಾಳಿಲಿ ಸ್ವಾಗತಿಸಿ ಹಂಸ ಸಖಾಫಿ ಕೊಟ್ಟಮುಡಿ ವಂದಿಸಿದರು.