ಕೊಡಗಿನಲ್ಲಿ 8 ಹೊಸ ಕೊವೀಡ್ ಪ್ರಕರಣ ಪತ್ತೆ

18/08/2020

ಮಡಿಕೇರಿ ಆ. 18 : ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆ ವೇಳೆಗೆ 8 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.
ಮಡಿಕೇರಿ ಗೌಳಿ ಬೀದಿಯ ಹಳೆ ಇಂಡೇನ್ ಗ್ಯಾಸ್ ಕಚೇರಿ ಎದುರಿನ 30 ವರ್ಷದ ಪುರುಷ.
ಸೋಮವಾರಪೇಟೆ ಆದರ್ಶ ದ್ರಾವಿಡ ಕಾಲೋನಿಯ 55 ವರ್ಷದ ಪುರುಷ.
ಮಡಿಕೇರಿ ಕಾನ್ವೆಂಟ್ ರಸ್ತೆಯ ಮುತ್ತಪ್ಪ ದೇವಾಲಯ ಬಳಿಯ 47 ವರ್ಷದ ಮಹಿಳೆ.
ವಿರಾಜಪೇಟೆ ಅಯ್ಮಂಗಲ ಕೊಮ್ಮೆತೋಡುವಿನ ಅಂಚೆ ಕಚೇರಿ ಬಳಿಯ 55 ವರ್ಷದ ಮಹಿಳೆ.
ಮಡಿಕೇರಿ ಚಾಮುಂಡೇಶ್ವರಿ ನಗರದ ಅಂಗನವಾಡಿ ಬಳಿಯ 15 ವರ್ಷದ ಬಾಲಕ.
ಮಡಿಕೇರಿ ಮಹದೇವಪೇಟೆಯ ಕಾಜಲ್ ಲೇಔಟಿನ 3 ನೇ ಬ್ಲಾಕಿನ 50 ವರ್ಷದ ಪುರುಷ.
ಕುಶಾಲನಗರ ನಿಜಾಮುದ್ದೀನ್ ಲೇಔಟಿನ 37 ಮತ್ತು 40 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1011 ಆಗಿದ್ದು, 710 ಮಂದಿ ಗುಣಮುಖರಾಗಿದ್ದಾರೆ. 289 ಸಕ್ರಿಯ ಪ್ರಕರಣಗಳಿದ್ದು, 12 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 256 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.