ಭಾರತದ ಜಿಡಿಪಿ ಶೇ.16.5 ಕುಸಿತ

18/08/2020

ನವದೆಹಲಿ ಆ.18 : ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.16.5 ರಷ್ಟು ಕುಸಿತ ಕಾಣಲಿದೆ ಎಂದು ಸ್ಟೇಟ್ ಬ್ಯಾಂಕ್ ನ ಸಂಶೋಧನಾ ವರದಿ ಇಕೋವ್ರಾಪ್ ಅಂದಾಜಿಸಿದೆ.
ಮೇ ತಿಂಗಳಲ್ಲಿ ಇಕೋವ್ರಾಪ್, 2020-21 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯನ್ನು ಶೇ.20 ರಷ್ಟು ಕುಸಿಯಲಿದೆ ಎಂದು ಅಂದಾಜಿಸಿತ್ತು. ಈಗ ಪರಿಷ್ಕೃತ ಅಂದಾಜಿನಲ್ಲಿ ಈಗಿನ ಅಸ್ಥಿರತೆಯ ನಡುವೆಯೂ ಶೇ.16.5 ರಷ್ಟು ಕುಸಿತ ಕಾಣಲಿದೆ ಎಂದು ವಿಶ್ಲೇಷಿಸಿದೆ.
ಹಣಕಾಸು- ಹಣಕಾಸೇತರ ಕಂಪನಿಗಳ ಫಲಿತಾಂಶಗಳು ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಾಗಿದ್ದು, 2021 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಾರ್ಪೊರೇಟ್ ಜಿವಿಎ ನಲ್ಲಿನ ಡಿಗ್ರೋಥ್ ರೆವಿನ್ಯೂ ಡಿಗ್ರೋತ್ ಗಿಂತ ಉತ್ತಮವಾಗಿದೆ.
ಈ ವರೆಗೂ 1,000 ಸಂಸ್ಥೆಗಳು ಮೊದಲ ತ್ರೈಮಾಸಿದ ತಮ್ಮ ಫಲಿತಾಂಶವನ್ನು ಪ್ರಕಟಿಸಿವೆ.