ಡಾ.ಸ್ನೇಹ ಅತ್ಯುತ್ತಮ ಮಹಿಳಾ ಉದ್ಯಮಿ
18/08/2020

ಬೆಂಗಳೂರು ಆ.18 : ಹಾಸನದ ಅಪ್ಪಟ ಗ್ರಾಮೀಣ ಪ್ರತಿಭೆ ಡಾ.ಸ್ನೇಹ ರಾಕೇಶ್ ಬ್ಯುಸಿನೆಸ್ ಮಿಂಟ್ ನಿಂದ ಅತ್ಯುತ್ತಮ ಉದಯೋನ್ಮುಖ ಮಹಿಳಾ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ.
ಗ್ರಾಮೀಣ ಸೊಗಡಿನ ಡಾ.ಸ್ನೇಹ ರಾಕೇಶ್ ಈ ಮೂಲಕ ದೊಡ್ಡ ಕನಸುಗಳೊಂದಿಗೆ ಯಶಸ್ಸಿನ ಶಿಖರವೇರುತ್ತಿದ್ದಾರೆ. ಇವರ ಸಾಧನೆಯನ್ನು ಜಾಗತಿಕ ಪೋಬ್ಸ್ ಪತ್ರಿಕೆ ಗುರುತಿಸಿದೆ. ತಂತ್ರಜ್ಞಾನ ಉದ್ಯಮ ರಂಗದಲ್ಲಿ ಮಹಿಳಾ ಉದ್ಯಮಿಯಾಗಿ ಯಶಸ್ಸಿನ ಪಥದಲ್ಲಿ ಚಲಿಸುತ್ತಿದ್ದಾರೆ.
ಹಾಸನದಿಂದ ಬೆಲ್ಜಿಯಂ ವರೆಗೆ ಸಂಚರಿಸಿ ತನ್ನದೇ ಆದ ಹೆಗ್ಗುರುತು ಮೂಡಿಸಿರುವ ಡಾ. ಸ್ನೇಹ ರಾಕೇಶ್, ತಂತ್ರಜ್ಞಾನ ಕೈಗಾರಿಕಾ ವಲಯದಲ್ಲಿ ಉನ್ನತ ಸ್ಥಾನ ತಲುಪಿದ್ದಾರೆ. ಸ್ಪರ್ಧೆಯಿಂದ ಹಿಂದೆ ಸರಿಯಬಾರದು, ವಿಶ್ವಾಸ ಕಳೆದುಕೊಳ್ಳಬಾರದು’ ಎನ್ನುವುದೇ ಇವರ ಯಶೋಗಾಥೆಯ ಮೂಲ ಮಂತ್ರವಾಗಿದೆ.
