ಗಾಯಕ ಪಂಡಿತ್ ಜಸ್‍ರಾಜ್ ನಿಧನ

August 18, 2020

ನವದೆಹಲಿ ಆ.18 : ವಿಶ್ವವಿಖ್ಯಾತ ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಜಸ್‍ರಾಜ್(90) ಅಮೆರಿಕದ ನ್ಯೂ ಜರ್ಸಿಯಲ್ಲಿ ಸೋಮವಾರ ನಿಧನರಾದರು. 80 ವರ್ಷಗಳ ಕಾಲ ಸಂಗೀತ ವೃತ್ತಿಜೀವನ ನಡೆಸಿದ್ದ ಅವರಿಗೆ ಪದ್ಮಶ್ರೀ(1975), ಪದ್ಮಭೂಷಣ(1990) ಹಾಗೂ ಪದ್ಮವಿಭೂಷಣ(2000), ಸಂಗೀತ ನಾಟಕ ಅಕಾಡೆಮಿಪ್ರಶಸ್ತಿ (1987), .1997-98ರಲ್ಲಿ ಕಾಳಿದಾಸ ಸಮ್ಮಾನ್ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ಗೌರವಗಳು ಸಂದಿದ್ದವು.
ಹರಿಯಾಣದ ಹಿಸ್ಸಾರ್ ನವರಾದ ಜಸ್‍ರಾಜ್ ಜೈಪುರ ಅತ್ರೌಲಿ ಘರಾನಾದ 83 ವರ್ಷದ ಕಿಶೋರಿ ಅಮೋಂಕರ್ ಅವರನ್ನೊಳಗೊಂಡ ಶಾಸ್ತ್ರೀಯ ಗಾಯಕರ ಕೊನೆಯ ಪೀಳಿಗೆಯವರಾಗಿದ್ದ ಜಸರಾಜ್ ಮೇವಾಟಿ ಘರಾಣದ ಅದ್ವರ್ಯುರಾಗಿದ್ದರು. ಅವರನ್ನು ಅವರ ತಂದೆ ಸಂಗೀತ ಜಗತ್ತಿಗೆ ಪರಿಚಯಿಸಿದ್ದರು, ನಂತರ ಅವರ ಹಿರಿಯ ಸಹೋದರ ಪಂಡಿತ್ ಪ್ರತಾಪ್ ನಾರಾಯಣ್ ಅವರ ಸಹಾಯದಿಂದ ತಬಲಾ ಜೊತೆಗಾರರಾಗಿ ತರಬೇತಿ ಪಡೆದರು.

error: Content is protected !!