ದೃಶ್ಯಂ ನಿರ್ದೇಶಕ ನಿಶಿಕಾಂತ್ ನಿಧನ

18/08/2020

ಹೈದರಾಬಾದ್ ಆ.18 : “ದೃಶ್ಯಂ”, “ಮದಾರಿ” ಯಂತಹಾ ಯಶಸ್ವಿ ಚಿತ್ರಗಳನ್ನು ನೀಡಿದ ನಿರ್ದೇಶಕ ನಿಶಿಕಾಂತ್ ಕಾಮತ್ ನಿಧನರಾಗಿದ್ದಾರೆ. ಹೈದರಾಬಾದ್‍ನ ಆಸ್ಪತ್ರೆ ಮೂಲಗಳ ಪ್ರಕಾರ ಕಾಮತ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು “ನಿರ್ದೇಶಕ ನಿಶಿಕಾಂತ್ ಕಾಮತ್ ಅವರು ಇಂದು 16:24 ಗಂಟೆಗೆ ನಿಧನರಾದರು. ಅವರು ಕಳೆದ ಎರಡು ವರ್ಷಗಳಿಂದ ಲಿವರ್ ಸಿರೋಸಿಸ್ ನಿಂದ ಬಳಲುತ್ತಿದ್ದರು” ಎಂದು ಹೈದರಾಬಾದ್ ಎಐಜಿ ಆಸ್ಪತ್ರೆ ಹೇಳಿದೆ.
ಯಕೃತ್ತಿನ ಸಮಸ್ಯೆಯಿಂದ ಹಲವು ದಿನಗಳಿಂದ ಬಳಲುತ್ತಿದ್ದ ನಿಶಿಕಾಂತ್ ಅವರು, ಅನಾರೋಗ್ಯ ಹೆಚ್ಚಾದ ಕಾರಣ ಜು.31ರಂದು ಹೈದರಾಬಾದ್’ನ ಎಐಜಿ ಆಸ್ಪತ್ರೆಗೆ ದಾಖಲಾಗಿದ್ದರು.
ನಿರ್ದೇಶಕ ಕಾಮತ್ ಮೃತಪಟ್ಟಿದ್ದಾರೆ ಎಂದು ಅವರ ಆಪ್ತ ಮರಾಠಿ ನಟ ಜಯವಂತ್ ವಾಡ್ಕರ್ ಹೇಳಿದ್ದಾರೆ. “ಮುಂಬೈ ಮೇರಿ ಜಾನ್” (2008) ನಲ್ಲಿ ಅವರೊಂದಿಗೆ ಕೆಲಸ ಮಾಡಿದ ನಟ ಆರ್ ಮಾಧವನ್ ಸೇರಿದಂತೆ ಅವರ ಅನೇಕ ಸಹಚರರು ಕಾಮತ್ ನಿಧನಕ್ಕೆ ಸಂತಾಪದ ಸಂದೇಶ ತಿಳಿಸಿದ್ದಾರೆ.