ಮೋಜುಮಸ್ತಿನ ಕೇಂದ್ರವಾದ ಮಕ್ಕಳಗುಡಿ ಬೆಟ್ಟ : ಸೂಕ್ತ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

August 18, 2020

ಸೋಮವಾರಪೇಟೆ ಆ. 18 : ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಕಿರಗಂದೂರು ಗ್ರಾಮದಲ್ಲಿರುವ ಮಕ್ಕಳಗುಡಿ ಬೆಟ್ಟ ಮದ್ಯವ್ಯಸನಿಗಳ ಮೋಜುಮಸ್ತಿನ ಕೇಂದ್ರವಾಗಿ ಬದಲಾಗುತ್ತಿದೆ.
ಬೆಟ್ಟದ ತುದಿಯಲ್ಲಿ ಮದ್ಯ ಸೇವಿಸಿ ಬಾಟಲಿಗಳನ್ನು ಒಡೆದು ಹಾಕಲಾಗಿದೆ. ನೀರಿನ ತೊಟ್ಟಿಯಲ್ಲಿಯೂ ಬಾಟಲಿಯನ್ನು ಹಾಕಿ ಕಲುಸಿತಗೊಳಿಸಲಾಗಿದೆ. ತುದಿಯಲ್ಲಿರುವ ವೀಕ್ಷಣಗೋಪುರದಲ್ಲಿ ನಿಂತು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಕುಟುಂಬ ಸಮೇತ ಹೋಗುತ್ತಾರೆ. ಈಗಂತೂ ಮಕ್ಕಳಗುಡಿ ಬೆಟ್ಟದಲ್ಲಿ ಶುಚಿತ್ವ ಇಲ್ಲದಂತಾಗಿದೆ. ಅನಾಗರಿಕರು ಪರಿಸರವನ್ನು ಮಲೀನ ಮಾಡುತ್ತಿದ್ದಾರೆ. ಕಿರಗಂದೂರು ಗ್ರಾಮ ಪಂಚಾಯಿತಿ ಆಡಳಿತ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

error: Content is protected !!