ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 1014 ಕ್ಕೆ ಏರಿಕೆ : 710 ಮಂದಿ ಗುಣಮುಖ

ಮಡಿಕೇರಿ ಆ.18 : ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆ ವೇಳೆಗೆ 8 ಹೊಸ ಕೋವಿಡ್-19 ಪ್ರಕರಣಗಳು ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 3 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು 11 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಸಿದ್ದಾರೆ.
ಮಡಿಕೇರಿ ಗೌಳಿ ಬೀದಿಯ ಹಳೆ ಇಂಡೇನ್ ಗ್ಯಾಸ್ ಕಚೇರಿ ಎದುರಿನ 30 ವರ್ಷದ ಪುರುಷ. ಸೋಮವಾರಪೇಟೆ ಆದರ್ಶ ದ್ರಾವಿಡ ಕಾಲೋನಿಯ 55 ವರ್ಷದ ಪುರುಷ. ಮಡಿಕೇರಿ ಕಾನ್ವೆಂಟ್ ರಸ್ತೆಯ ಮುತ್ತಪ್ಪ ದೇವಾಲಯ ಬಳಿಯ 47 ವರ್ಷದ ಮಹಿಳೆ. ವಿರಾಜಪೇಟೆ ಅಯ್ಮಂಗಲ ಕೊಮ್ಮೆತೋಡುವಿನ ಅಂಚೆ ಕಚೇರಿ ಬಳಿಯ 55 ವರ್ಷದ ಮಹಿಳೆ. ಮಡಿಕೇರಿ ಚಾಮುಂಡೇಶ್ವರಿ ನಗರದ ಅಂಗನವಾಡಿ ಬಳಿಯ 15 ವರ್ಷದ ಬಾಲಕ. ಮಡಿಕೇರಿ ಮಹದೇವಪೇಟೆಯ ಕಾಜಲ್ ಲೇಔಟಿನ 3 ನೇ ಬ್ಲಾಕಿನ 50 ವರ್ಷದ ಪುರುಷ. ಕುಶಾಲನಗರ ನಿಜಾಮುದ್ದೀನ್ ಲೇಔಟಿನ 37 ಮತ್ತು 40 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮಾರ್ಕೆಟ್ ರಸ್ತೆಯ ನಗರ ಆರೋಗ್ಯ ಕೇಂದ್ರ ಬಳಿಯ 62 ವರ್ಷದ ಪುರುಷ. ಮಡಿಕೇರಿ ಕನಕದಾಸ ರಸ್ತೆಯ ರಾಯಲ್ ಬಿರಿಯಾನಿ ಹೊಟೇಲ್ ಬಳಿಯ 17 ವರ್ಷದ ಪುರುಷ. ಕುಶಾಲನಗರ ಸಿದ್ದಯ್ಯ ಪುರಾಣಿಕ್ ಬಡಾವಣೆಯ 5 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1014 ಆಗಿದ್ದು, 710 ಮಂದಿ ಗುಣಮುಖರಾಗಿದ್ದಾರೆ. 292 ಸಕ್ರಿಯ ಪ್ರಕರಣಗಳಿದ್ದು, 12 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 258 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
