ಆ. 20 ರಂದು ಡಿ. ದೇವರಾಜ ಅರಸು 105ನೇ ಜನ್ಮದಿನಾಚರಣೆ

18/08/2020

ಮಡಿಕೇರಿ ಆ. 18 : ಸಹಮತ ವೇದಿಕೆ ಮತ್ತು ಅಹಿಂದ ಒಕ್ಕೂಟದ ಜಂಟಿ ಆಶ್ರಯದಲ್ಲಿ ಹಿಂದುಳಿದ ವರ್ಗಗಳ ಹರಿಕಾರ ಮತ್ತು ದುರ್ಬಲವರ್ಗಗಳ ಆಶಾಕಿರಣ, ರಾಜ್ಯದ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ್ ಅರಸು ಅವರ 105ನೇ ಜನ್ಮದಿನಾಚರಣೆಯು ಆ. 20 ರಂದು ನಡೆಯಲಿದೆ.
ಅಂದು ಮಧ್ಯಾಹ್ನ 2.30ಕ್ಕೆ ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದ್ದು, ಕಾರ್ಯಕ್ರಮಕ್ಕೆ ಅಹಿಂದ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಟಿ.ಪಿ. ರಮೇಶ್ ಮತ್ತು ಜಿಲ್ಲೆಯ ವಿವಿಧ ಸಮಾಜಗಳ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ.
ಕೋವಿಡ್-19ರ ನಿಯಮದಂತೆ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುವುದು ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಟಿ. ಎಂ. ಮುದ್ದಯ್ಯ ಮತ್ತು ಸಹಮತ ವೇದಿಕೆಯ ಉಪಾಧ್ಯಕ್ಷ ಕೆ. ಟಿ. ಬೇಬಿ ಮ್ಯಾಥ್ಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.