ಆ.20 ರಿಂದ ರೇಡಿಯೋ ಸರಣಿ ಕಾರ್ಯಕ್ರಮ
18/08/2020

ಮಡಿಕೇರಿ ಆ.18 : -ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿಯಲ್ಲಿ ಮಕ್ಕಳ ದತ್ತು ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿವೆ. ಈ ಕಾರ್ಯಕ್ರಮದಲ್ಲಿ ಪೋಷಕರು, ಕುಟುಂಬಸ್ಥರು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು, ಮಕ್ಕಳ ಪಾಲನಾ ಸಂಸ್ಥೆಗಳು ಮತ್ತು ವಿವಿಧ ಇಲಾಖೆಗಳು ಹೀಗೆ ಅನೇಕ ವಿಧದ ಪಾಲುದಾರರು ಇದ್ದು, ಎಲ್ಲರಿಗೂ ದತ್ತು ವಿಷಯದ ಕುರಿತು ಮಾಹಿತಿಯ ಅವಶ್ಯಕತೆ ಇದೆ. ಇದಕ್ಕೆ ಸಂಬಂಧಪಟ್ಟಂತೆ ಆಗಸ್ಟ್, 20 ರಿಂದ ಪ್ರಾರಂಭಗೊಂಡು, ಆಗಸ್ಟ್, 27, ಸೆಪ್ಟೆಂಬರ್, 03, 10, 17, 24 ಮತ್ತು ಅಕ್ಟೋಬರ್, 01 ರಂದು ಆಯಾಯ ದಿನಗಳಂದು ಬೆಳಗ್ಗೆ 7.15 ಗಂಟೆಗೆ ಆಕಾಶವಾಣಿಯಲ್ಲಿ “ಸಾರಾ ಆಸರೆ” ಎಂಬ ರೇಡಿಯೋ ಸರಣಿ ಕಾರ್ಯಕ್ರಮವನ್ನು ಪ್ರಸಾರವಾಗಲಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.
