ಕೊಡಗಿನಲ್ಲಿ 20 ಹೊಸ ಪ್ರಕರಣ ಪತ್ತೆ : ಸಕ್ರಿಯ ಪ್ರಕರಣ 297

ಮಡಿಕೇರಿ ಆ. 19 : ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8 ಗಂಟೆ ವೇಳೆಗೆ 20 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ.
ಮಡಿಕೇರಿ ಸುದರ್ಶನ್ ಲೇಔಟಿನ 29 ವರ್ಷದ ಮಹಿಳೆ.
ಮಡಿಕೇರಿ ರಾಣಿಪೇಟೆಯ 58 ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಡಿಎಆರ್ ವಸತಿ ಗೃಹದ 28 ವರ್ಷದ ಮಹಿಳೆ.
ಕುಶಾಲನಗರ ಬಿ.ಎಂ ರಸ್ತೆಯ ಬ್ಯಾಂಕ್ ಆಫ್ ಇಂಡಿಯಾ ಬಳಿಯ 65 ವರ್ಷದ ಪುರುಷ.
ಕುಶಾಲನಗರ ಪೆÇಲೀಸ್ ಗ್ರೌಂಡ್ ಬಳಿಯ ರಾಧಾಕೃಷ್ಣ ಬಡಾವಣೆಯ 10 ವರ್ಷದ ಬಾಲಕ, 57 ವರ್ಷದ ಮಹಿಳೆ, 28 ವರ್ಷದ ಪುರುಷ.
ಮಡಿಕೇರಿ ಸ್ಟೋನ್ ಹಿಲ್ ರಸ್ತೆಯ ರೈಫೆಲ್ ರೇಂಜಿನ 27 ವರ್ಷದ ಮಹಿಳೆ.
ಮಡಿಕೇರಿ ಸ್ಟೋನ್ ಹಿಲ್ ರಸ್ತೆಯ ರೈಫಲ್ ರೇಂಜಿನ 25 ಮತ್ತು 26 ವರ್ಷದ ಪುರುಷರು.
ವಿರಾಜಪೇಟೆ ಕಲ್ಲುಬಾಣೆ ಅಂಚೆಯ ಅರ್ಜಿ ಗ್ರಾಮದ 38 ವರ್ಷದ ಮಹಿಳೆ.
ವಿರಾಜಪೇಟೆ ಕಲ್ಲುಬಾಣೆ ಅಂಚೆಯ ಅರ್ಜಿ ಗ್ರಾಮದ 59 ವರ್ಷದ ಮಹಿಳೆ ಮತ್ತು 73 ವರ್ಷದ ಪುರುಷ.
ವಿರಾಜಪೇಟೆ ಬೆಟ್ಟೋಳಿ ಗ್ರಾಮ ಮತ್ತು ಅಂಚೆಯ 41 ಮತ್ತು 18 ವರ್ಷದ ಮಹಿಳೆ.
ವಿರಾಜಪೇಟೆ ಬೆಟ್ಟೋಳಿ ಅಂಚೆಯ ರಾಮನಗರ ಗ್ರಾಮದ 36 ವರ್ಷದ ಪುರುಷ, 28 ಮತ್ತು 66 ವರ್ಷದ ಮಹಿಳೆ, 4 ಮತ್ತು 2 ವರ್ಷದ ಬಾಲಕಿಯರಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1034 ಆಗಿದ್ದು, 725 ಮಂದಿ ಗುಣಮುಖರಾಗಿದ್ದಾರೆ. 297 ಸಕ್ರಿಯ ಪ್ರಕರಣಗಳಿದ್ದು, 12 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 244 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
