ಕಳೆದ 5 ತಿಂಗಳುಗಳಿಂದ ಖಾಸಗಿ ಬಸ್ ಗಳು ಸಂಚರಿಸಲೇ ಇಲ್ಲ

19/08/2020

ಮಡಿಕೇರಿ ಆ. 19 : ಕೋವಿಡ್ ವ್ಯಾಪಿಸುವ ಆತಂಕದಿಂದ ಕೊಡಗಿನ ಖಾಸಗಿ ಬಸ್ ಗಳು ಸಂಚರಿಸದೆ ಐದು ತಿಂಗಳುಗಳೇ ಕಳೆದಿದೆ. ಮಡಿಕೇರಿಯಲ್ಲಿರು ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ಗಳು ಗಾಳಿ, ಮಳೆ ಎನ್ನದೆ ತುಕ್ಕು ಹಿಡಿಯುತ್ತಾ ನಿಂತಿವೆ.

ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದು, ಬಸ್ ಮಾಲೀಕರು ಹಾಗೂ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದಾಯವಿಲ್ಲದ ನೌಕರರು ಪರ್ಯಾಯ ಉದ್ಯೋಗದ ಕಡೆ ಮುಖ ಮಾಡಿದ್ದಾರೆ. ಬಸ್ ಸಂಚಾರವಿಲ್ಲದೆ ಗ್ರಾಮೀಣ ಜನರು ಕಷ್ಟ ಅನುಭವಿಸುತ್ತಿದ್ದಾರೆ.