ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿರುವ ದುಬಾರೆ

19/08/2020

ಮಡಿಕೇರಿ ಆ. 19 : ಪ್ರತಿದಿನ ಸಾವಿರಾರು ಪ್ರವಾಸಿಗರಿಂದ ತುಂಬಿರುತ್ತಿದ್ದ ಕೊಡಗಿನ ದುಬಾರೆ ಪ್ರವಾಸಿತಾಣ ಈಗ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ. ಮಹಾಮಳೆಯ ಪ್ರವಾಹ ತಗ್ಗಿದ್ದರೂ ಕೋವಿಡ್ ಹಿನ್ನೆಲೆ ಪ್ರವಾಸಿಗರು ಬಾರದೆ ಇರುವುದರಿಂದ ಒಂದು ದಡದಿಂದ ಮತ್ತೊಂದು ದಡಕ್ಕೆ ಸಾಗುತ್ತಿದ್ದ ಬೋಟ್ ಗಳು ಮೂಲೆ ಗುಂಪಾಗಿ ನಿಂತಿವೆ. ರ್ಯಾಫ್ಟಿಂಗ್ ಸಾಧನಗಳು ಶೆಡ್ ಸೇರಿದ್ದು, ರ್ಯಾಫ್ಟ್ ಉದ್ಯೋಗಿಗಳು ಸಂಪಾದನೆ ಇಲ್ಲದೆ ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.