ತುಳು ಭಾಷಿಕರಿಗೆ ತುಳು ಕವಿತೆ, ತುಳು ಗಾದೆ ಮತ್ತು ತುಳು ಎದುರು ಕತೆ ಸ್ಪರ್ಧೆ

ಮಡಿಕೇರಿ ಆ. 19 : ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಸಹಯೋಗದಲ್ಲಿ ಕೊಡಗು ಜಿಲ್ಲೆಯ ತುಳು ಭಾಷಿಕರಿಗೆ “ತುಳು ಕವಿತೆ” “ತುಳು ಗಾದೆ” ಮತ್ತು ತುಳು ಎದುರು ಕತೆ” ಸ್ಪರ್ಧೆ ಯನ್ನು ಆಯೋಜಿಸಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಪಿ.ಎಂ. ರವಿ ತಿಳಿಸಿದ್ದಾರೆ.
ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ನೇತೃತ್ವದಲ್ಲಿ ಅಕಾಡಮಿಯು ನಿರಂತರ ಕಾರ್ಯಕ್ರಮ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಕೊಡಗು ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮ ನಡೆಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಳು ಗಾದೆ, ಕವಿತೆ, ಎದುರು ಕತೆ ಸ್ಪರ್ಧೆಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ನಗದು, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ ಎಂದರು.
ತುಳು ಗಾದೆ, ಕವಿತೆ, ಎದುರು ಕತೆ ಶುದ್ದ ತುಳು ಭಾಷೆಯದಾಗಿರಬೇಕು. ಈ ಮೊದಲು ಎಲ್ಲಿಯು ಪ್ರಕಟವಾಗಿರಬಾರದು. ಗಾದೆ ಸ್ಪರ್ಧೆಗೆ ಅತಿ ಹೆಚ್ಚು ಗಾದೆ ಕಳುಹಿಸಿದವರನ್ನು ಆಯ್ಕೆ ಮಾಡಲಾಗುವುದು. ತುಳು ಎದುರು ಕಥೆಗೆ ಉತ್ತರ ನೀಡುವವರಿಗೆ 20 ಪ್ರಶ್ನೆಗಳಿದ್ದು, ಪ್ರಶ್ನೆಯನ್ನು ವಾಟ್ಸ್‍ಪ್ ಮೂಲಕ ಕಳುಹಿಸಿ ಕೊಡಲಾಗುವುದು.
ಹೆಸರು ನೋಂದಾಯಿಸಿಕೊಳ್ಳಲು ಆ. 31 ಕೊನೆಯ ದಿನವಾಗಿದ್ದು, ಸ್ಪರ್ಧಿಗಳು ವಾಟ್ಸಪ್ ನಂ. 9972073295 ಕ್ಕೆ ತಮ್ಮ ಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಕಳುಹಿಸುವಂತೆ ತಿಳಿಸಿದರು.



