ಕೊಡಗಿನಲ್ಲಿ ಒಂದೇ ದಿನ 72 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ

19/08/2020

ಮಡಿಕೇರಿ ಆ.19 : ಕೊಡಗು ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 20 ಹಾಗೂ ಮಧ್ಯಾಹ್ನ 52 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಒಂದೇ ದಿನ 72 ಮಂದಿ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯೂ 1086ಕ್ಕೆ ಏರಿಕೆಯಾದಂತಾಗಿದೆ.
ಬುಧವಾರ ಬೆಳಗ್ಗೆ ಮಡಿಕೇರಿ ಸುದರ್ಶನ್ ಲೇಔಟ್‍ನ 28ವರ್ಷದ ಮಹಿಳೆ, ರಾಣಿಪೇಟೆಯ 58 ವರ್ಷದ ಪುರುಷ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಡಿಎಆರ್ ವಸತಿ ಗೃಹದ 28 ವರ್ಷದ ಮಹಿಳೆ, ಕುಶಾಲನಗರ ಬಿ.ಎಂ ರಸ್ತೆಯ ಬ್ಯಾಂಕ್ ಆಫ್ ಇಂಡಿಯಾ ಬಳಿಯ 65 ವರ್ಷದ ಪುರುಷ, ಪೊಲೀಸ್ ಗ್ರೌಂಡ್ ಬಳಿಯ ರಾಧಾಕೃಷ್ಣ ಬಡಾವಣೆಯ 10 ವರ್ಷದ ಬಾಲಕ, 57 ವರ್ಷದ ಮಹಿಳೆ, 28 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಮಡಿಕೇರಿ ಸ್ಟೋನ್ ಹಿಲ್ ರಸ್ತೆಯ ರೈಫೆಲ್ ರೇಂಜಿನ 27ವರ್ಷದ ಮಹಿಳೆ, ಮಡಿಕೇರಿ ಸ್ಟೋನ್ ಹಿಲ್ ರಸ್ತೆಯ ರೈಫಲ್ ರೇಂಜ್ ನ 25ಮತ್ತು 26 ವರ್ಷದ ಪುರುಷರು, ವೀರಾಜಪೇಟೆ ಕಲ್ಲುಬಾಣೆ ಅರ್ಜಿ ಗ್ರಾಮದ 38 ವರ್ಷದ ಮಹಿಳೆ, ಅರ್ಜಿ ಗ್ರಾಮದ 59 ವರ್ಷದ ಮಹಿಳೆ ಮತ್ತು 73 ವರ್ಷದ ಪುರುಷನಲ್ಲಿ ಸೋಂಕು ಗೋಚರಿಸಿದೆ.
ವೀರಾಜಪೇಟೆ ಬೇಟೋಳಿ ಗ್ರಾಮದ 41 ಮತ್ತು 18 ವರ್ಷದ ಮಹಿಳೆ, ರಾಮನಗರ ಗ್ರಾಮದ 36 ವರ್ಷದ ಪುರುಷ, 28 ಮತ್ತು 66 ವರ್ಷದ ಮಹಿಳೆ,4 ಮತ್ತು 2 ವರ್ಷದ ಬಾಲಕಿಯರಿಗೆ ಸೋಂಕು ದೃಢಪಟ್ಟಿದೆ.
::: 52 ಹೊಸ ಪ್ರಕರಣ :::
ಬುಧವಾರ ಮಧ್ಯಾಹ್ನದ ವೇಳೆಗೆ ಜಿಲ್ಲೆಯಲ್ಲಿ ಮತ್ತೆ 52 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ದಿನದ ಸೋಂಕಿತರ ಸಂಖ್ಯೆ 72ಕ್ಕೆ ಏರಿಕೆಯಾಗುವುದರೊಂದಿಗೆ ಈ ಹಿಂದಿನ ದಾಖಲೆಯನ್ನು ಮುರಿದಿದೆ.
ಸುಂಟಿಕೊಪ್ಪ ಮಧುರಮ್ಮ ಬಡಾವಣೆಯ 62 ವರ್ಷದ ಪುರುಷ ಹಾಗೂ 56 ವರ್ಷದ ಮಹಿಳೆ, ಕೊಡ್ಲಿಪೇಟೆ ನೀರುಗುಂದದ 50 ವರ್ಷದ ಪುರುಷ, 30 ವರ್ಷದ ಮಹಿಳೆ, 10 ವರ್ಷದ ಬಾಲಕ ಹಾಗೂ 10 ತಿಂಗಳ ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿದೆ.
ವೀರಾಜಪೇಟೆ ತಾಲೂಕಿನ ಹೊಲಮಾಳದ 52 ವರ್ಷದ ಪುರುಷ, 48 ವರ್ಷದ ಮಹಿಳೆ, 32 ವರ್ಷದ ಪುರುಷ, 31 ವರ್ಷದ ಮಹಿಳೆ, 36 ವರ್ಷದ ಪುರುಷ, 5 ವರ್ಷದ ಬಾಲಕಿ, 29 ವರ್ಷದ ಪುರುಷ, 31 ವರ್ಷದ ಮಹಿಳೆ, 36 ವರ್ಷದ ಪುರುಷ ಹಾಗೂ 13 ವರ್ಷದ ಬಾಲಕಿ, ಗೋಣಿಕೊಪ್ಪ ಮುಕುಂದ ಲೇಔಟ್‍ನ 41 ವರ್ಷ, 68 ವರ್ಷದ ಪುರುಷ, 68 ವರ್ಷದ ಮಹಿಳೆ, 8 ವರ್ಷದ ಬಾಲಕಿ ಹಾಗೂ 5 ವರ್ಷದ ಬಾಲಕನಲ್ಲಿ ಸೋಂಕು ದೃಢಪಟ್ಟಿದೆ.
ವೀರಾಜಪೇಟೆ ತಿತಿಮತಿಯ ಮರಪಾಲ ಪೈಸಾರಿಯ 75 ವರ್ಷದ ಪುರುಷ, 35 ಹಗೂ 16 ವರ್ಷದ ಮಹಿಳೆ, ವೀರಾಜಪೇಟೆ ಸುಂಕದಕಟ್ಟೆಯ 38 ವರ್ಷದ ಮಹಿಳೆ, 17 ವರ್ಷದ ಪುರುಷ ಹಾಗೂ 13 ವರ್ಷದ ಬಾಲಕ, ಮಡಿಕೇರಿ ಸ್ಟೋನ್ ಹಿಲ್ ರಸ್ತೆಯ 68 ಹಾಗೂ 65 ವರ್ಷದ ಪುರುಷರು, 58 ವರ್ಷದ ಮಹಿಳೆ, ಸೋಮವಾರಪೇಟೆ ಗರಗಂದೂರಿನ 24 ವರ್ಷದ ಗರ್ಭಿಣಿ, ಮಾದಾಪುರ ಕಾರಿಕಾಡುವಿನ 32 ವರ್ಷದ ಗರ್ಭಿಣಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕುಶಾಲನಗರದ ಕೂಡ್ಲೂರು ಎಬಿಸಿ ಮೋಂಟೆಸ್ಟರಿ ಬಳಿಯ 27 ವರ್ಷದ ಪುರುಷ, ಕುಶಾಲನಗರ ಗೋಪಾಲ ಸರ್ಕಲ್‍ನ 30 ವರ್ಷದ ಮಹಿಳೆ, ಬೈಚನಹಳ್ಳಿಯ ರಾಯಲ್ ಕಂಫರ್ಟ್‍ನ 45 ವರ್ಷದ ಪುರುಷ, ಕೂಡುಮಂಗಳೂರಿನ 16 ವರ್ಷದ ಬಾಲಕ, ಸೋಮವಾರಪೇಟೆ ಎಂ.ಡಿ.ಬ್ಲಾಕ್‍ನ 19 ವರ್ಷದ ಮಹಿಳೆ, ಬಳಗುಂದ ಬಜೀರ್‍ಗುಂಡಿಯ ಅಂಗನವಾಡಿ ಬಳಿಯ 51 ವರ್ಷದ ಪುರುಷ, ಕಾವಡಿಕಟ್ಟೆಯ 56 ವರ್ಷದ ಪುರುಷ ಪೊಲೀಸ್ ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ಗೋಚರಿಸಿದೆ.
ವೀರಾಜಪೇಟೆ ತಾಲೂಕಿನ ಸಿದ್ದಾಪುರ ಪೊಲೀಸ್ ವಸತಿಗೃಹದ 29 ವರ್ಷದ ಪುರುಷ ಪೊಲೀಸ್ ಸಿಬ್ಬಂದಿ, ಮುತ್ತಪ್ಪ ದೇವಾಲಯ ಬಳಿಯ 52 ವರ್ಷದ ಪುರುಷ ಪೊಲೀಸ್ ಸಿಬ್ಬಂದಿ, ಸ್ವರ್ಣಮಾಲ ಕಲ್ಯಾಣ ಮಂಟಪ ಬಳಿಯ 54 ವರ್ಷದ ಕೆಎಸ್‍ಆರ್‍ಟಿಸಿ ಸಿಬ್ಬಂದಿ, ಹುದಿಕೇರಿಯ ಆರೋಗ್ಯ ಇಲಾಖೆಯ 31 ವರ್ಷದ ಪುರುಷ ಸಿಬ್ಬಂದಿ, ವೀರಾಜಪೇಟೆ ವಿಜಯನಗರ ಎರಡನೇ ಹಂತದ ಎ ಟು ಝೆಡ್ ಕೆಟರರ್ಸ್ ಮುಂಭಾಗದ 59 ವರ್ಷದ ಪುರುಷನಲ್ಲೂ ಸೋಂಕು ದೃಢಪಟ್ಟಿದೆ.
ವೀರಾಜಪೇಟೆ ತಾಲೂಕಿನ ಕುಟ್ಟ ತೈಲ ಗ್ರಾಮದ 64 ವರ್ಷದ ಪುರುಷ, ವೀರಾಜಪೇಟೆ ಮೀನುಪೇಟೆಯ 57 ವರ್ಷದ ಪುರುಷ ಪೊಲೀಸ್ ಸಿಬ್ಬಂದಿ, ನಾಪೋಕ್ಲು ಪೊಲೀಸ್ ಠಾಣೆ ಬಳಿಯ 34 ವರ್ಷದ ಪುರುಷ, ಮಡಿಕೇರಿ 14ನೇ ಬ್ಲಾಕ್‍ನ 73 ವರ್ಷದ ಪುರುಷ, ವೀರಾಜಪೇಟೆ ತೆರಾಲುವಿನ 31 ವರ್ಷದ ಮಹಿಳೆ, ಮಡಿಕೇರಿ ಕೋಡಂಬೂರಿನ 23 ವರ್ಷ ಮಹಿಳೆ, ರ್ಯಾಪಿಡ್ ಆಂಟಿಜೆನ್ ಕಿಟ್ ಪರೀಕ್ಷೆ ಮೂಲಕ ಮಾದಾಪುರದ ಕರ್ಕಾಡು ಬದ್ರಿಯಾ ಮಂಜಿಲ್ ಬಳಿಯ 65 ವರ್ಷದ ಮಹಿಳೆ, ಕುಶಾಲನಗರ ನಲ್ಲೂರು ಗ್ರಾಮದ 25 ವರ್ಷದ ಮಹಿಳೆ ಹಾಗೂ ಸೋಮವಾರಪೇಟೆಯ 28 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 1086ರಷ್ಟಾಗಿದ್ದು, ಈ ಪೈಕಿ 725 ಮಂದಿ ಗುಣಮುಖರಾಗಿದ್ದಾರೆ. 347 ಸಕ್ರಿಯ ಪ್ರಕರಣಗಳಿದ್ದು, 14 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 267 ಆಗಿದೆ ಎಂದು ಅವರು ವಿವರಿಸಿದ್ದಾರೆ.