ಪೆರಾಜೆ ಸಹಕಾರ ಸಂಘದಿಂದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಚೆಕ್ ವಿತರಣೆ

19/08/2020

ಮಡಿಕೇರಿ ಆ.19 : ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ತಡೆಗಟ್ಟಲು ವೈದ್ಯರು, ನರ್ಸುಗಳು, ಆಶಾ ಕಾರ್ಯಕರ್ತೆಯರು, ಪೋಲೀಸ್ ಮತ್ತು ಇಲಾಖೆ ಅಧಿಕಾರಿಗಳು ಅವಿರತ ಶ್ರಮವಹಿಸುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ.
ಈ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆಶಾ ಕಾರ್ಯಕರ್ತೆಯರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಮನಗಂಡು ಇವರ ಕಾರ್ಯಕ್ಕೆ ಉತ್ತೇಜನ ನೀಡುವ ಸಲುವಾಗಿ ಸಹಕಾರ ಸಂಘದ ವತಿಯಿಂದ ಆಶಾ ಕಾರ್ಯಕರ್ತೆಯರಾದ, ಪೂರ್ಣಾಕ್ಷಿ ಎ.ಟಿ, ದಿವ್ಯಾ ಹೆಚ್.ಯು, ಹೇಮಲತಾ ಆರ್.ಎಸ್ ಮತ್ತು ಜಯಂತಿ .ಕೆ.ಎಂ ಇವರುಗಳಿಗೆ ತಲಾ 3 ಸಾವಿರದಂತೆ ಇತ್ತೀಚೆಗೆ ಆಡಳಿತ ಮಂಡಳಿ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಅವರು ಪ್ರೋತ್ಸಾಹಧನದ ಚೆಕ್ ವಿತರಿಸಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಮೋನಪ್ಪ ಎನ್.ಬಿ, ಅಶೋಕ ಪಿ.ಎಂ, ಪ್ರಸನ್ನ ನೆಕ್ಕಿಲ, ಗಾಂಧೀಪ್ರಸಾದ್ ಬಂಗಾರಕೋಡಿ, ದೀನರಾಜ ದೊಡ್ಡಡ್ಕ, ಜಯರಾಮ ಪಿ.ಟಿ, ಶೇಷಪ್ಪ ನಾಯ್ಕ ನಿಡ್ಯಮಲೆ, ಪ್ರಮಿಳಾ ಎನ್. ಬಂಗಾರಕೋಡಿ, ರೇಣುಕಾ ಕುಂದಲ್ಪಾಡಿ, ಉದಯಕುಮಾರ ಪಿ.ಎ, ಕಿರಣ ಬಂಗಾರಕೋಡಿ ಮತ್ತು ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ ಎಚ್.ಕೆ ಅವರು ಉಪಸ್ಥಿತರಿದ್ದರು.