ಸೋಮವಾರಪೇಟೆ ಕರವೇ ಕಾರ್ಯಕರ್ತರಿಂದ ಸಾಧಕ ವಿದ್ಯಾರ್ಥಿನಿ ಟಿ.ಕೆ. ಭವಾನಿಗೆ ನೆರವು

19/08/2020

ಮಡಿಕೇರಿ ಆ. 19 :

ಕಡು ಬಡತನದ ನಡುವೆ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಸಾಧನೆ ಮಾಡಿರುವ ಪ್ರತಿಭಾವಂತ ವಿದ್ಯಾರ್ಥಿನಿ ವಿರಾಜಪೇಟೆಯ ಟಿ.ಕೆ.ಭವಾನಿಗೆ ಕರ್ನಾಟಕ ರಕ್ಷಣಾ ವೇದಿಕೆಯ ವಿರಾಜಪೇಟೆ ಹಾಗೂ ಸೋಮವಾರಪೇಟೆ ಘಟಕ ನೋಕಿಯಾ ಆಂಡ್ರಾಯ್ಡ್ ಫೋನ್ ಮತ್ತು ದಿನ ಬಳಕೆಯ ವಸ್ತುಗಳನ್ನು ನೀಡಿತು.
ಭವಾನಿ ಮನೆಗೆ ಭೇಟಿ ನೀಡಿದ ಸೋಮವಾರಪೇಟೆÀ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜಾ, ವಿರಾಜಪೇಟೆ ಅಧ್ಯಕ್ಷ ಅನಿಲ್ ಕುಮಾರ್, ನಗರ ಕಾರ್ಯದರ್ಶಿ ಸಬಾಸ್ಟಿನ್ ಅವರುಗಳು ಪ್ರೋತ್ಸಾಹದ ಮಾತುಗಳನ್ನಾಡಿದರು.

ನಗರ ಕಾರ್ಯದರ್ಶಿ ಸಬಾಸ್ಟಿನ್, ಖಜಾಂಚಿ ತಬ್ರೆಜ್, ಹೋಬಳಿ ಅಧ್ಯಕ್ಷ ಜುನೈದ್ ಹಾಗೂ ಶಿವರಾಜ್ ಮತ್ತು ಕರವೇ ಕಾರ್ಯಕರ್ತರು ಹಾಜರಿದ್ದರು.