ಕೊಡಗಿನಲ್ಲಿ 12 ಹೊಸ ಕೊವೀಡ್ ಪ್ರಕರಣ ಪತ್ತೆ

August 20, 2020

ಮಡಿಕೇರಿ ಆ. 20 : ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8 ಗಂಟೆ ವೇಳೆಗೆ 12 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.
ಸೋಮವಾರಪೇಟೆ ಹೊಸತೋಟ ಅಂಗನವಾಡಿ ಬಳಿಯ 24 ವರ್ಷದ ಮಹಿಳೆ.
ವಿರಾಜಪೇಟೆ ವಿಜಯನಗರದ ಚೋಟಾ ಚಾಂಪಿಯನ್ ನರ್ಸರಿ ಶಾಲೆ ಬಳಿಯ 27 ವರ್ಷದ ಪುರುಷ.
ಮೂರ್ನಾಡು ಪಂಚರತ್ನ ಹೊಟೇಲ್ ಬಳಿಯ 45 ವರ್ಷದ ಪುರುಷ ಮತ್ತು 36 ವರ್ಷದ ಮಹಿಳೆ.
ವಿರಾಜಪೇಟೆ ಪೆÇನ್ನಂಪೇಟೆಯ ಜೋಡ್ ಪಾತಿ ಬಳಿಯ 31 ವರ್ಷದ ಪುರುಷ.
ಅರೆಕಾಡು ಗ್ರಾಮ ಜಯಜೀವ ರಾಮ್ ಕಾಲೋನಿಯ 20 ವರ್ಷದ ಪುರುಷ.
ವಿರಾಜಪೇಟೆ ವಿಜಯನಗರ ಸುರೂರ್ ಲಾಡ್ಜ್ ಬಳಿಯ 39 ವರ್ಷದ ಮಹಿಳೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮೇಲಿನ ಗೌಡ ಸಮಾಜ ಬಳಿಯ 30 ವರ್ಷದ ಮಹಿಳೆ.
ಮಡಿಕೇರಿ ಕಾಲೇಜು ರಸ್ತೆಯ 61 ವರ್ಷದ ಪುರುಷ.
ನೆಲ್ಲಿ ಹುದಿಕೇರಿ ರಿವರ್ ಸೈಡಿನ 21 ವರ್ಷದ ಮಹಿಳೆ.
ಕುಶಾಲನಗರ ರಾಧಾಕೃಷ್ಣ ಬಡಾವಣೆಯ 22 ಮತ್ತು 50 ವರ್ಷದ ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1098 ಆಗಿದ್ದು, 774 ಮಂದಿ ಗುಣಮುಖರಾಗಿದ್ದಾರೆ. 310 ಸಕ್ರಿಯ ಪ್ರಕರಣಗಳಿದ್ದು, 14 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 255 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.