10 ಸಾವಿರ ಸೇನಾ ಸಿಬ್ಬಂದಿಗಳು ವಾಪಾಸ್

20/08/2020

ನವದೆಹಲಿ ಆ.20 : ಜಮ್ಮು-ಕಾಶ್ಮೀರದಿಂದ 10 ಸಾವಿರ ಸೇನಾ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆರ್ಟಿಕಲ್ 370 ರದ್ದತಿ ಹಿನ್ನೆಲೆಯಲ್ಲಿ ಕಳೆದ ವರ್ಷ ಈ ಪ್ರಮಾಣದಲ್ಲಿ ಸೇನಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು.
ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಕೇಂದ್ರ ಸರ್ಕಾರ ಸೇನಾ ಸಿಬ್ಬಂದಿಗಳನ್ನು ಹಿಂಪಡೆಯುವುದಕ್ಕೆ ಆದೇಶ ನೀಡಿದೆ.
ಮೇ ತಿಂಗಳಲ್ಲಿ ಕೇಂದ್ರಾಡಳಿತ ಪ್ರದೇಶದಿಂದ 10 ಸಿಎಪಿಎಫ್ ಕಂಪನಿಗಳನ್ನು ಹಿಂಪಡೆಯಲು ಆದೇಶ ನೀಡಿತ್ತು. ಕಳೆದ ಡಿಸೆಂಬರ್ ನಲ್ಲಿ ಇಂತಹ 72 ಯುನಿಟ್ ಗಳನ್ನು ಹಿಂಪಡೆಯಲಾಗಿತ್ತು.