ಮಂಗನಿಗೆ ಕೊಡಗಿನ ಅಕ್ಕಿ ರೊಟ್ಟಿಯ ಬ್ರೇಕ್ ಫಾಸ್ಟ್

20/08/2020

ಮಡಿಕೇರಿ ಆ. 20 : ಕೊಡಗಿನಲ್ಲೀಗ ವನ್ಯಜೀವಿಗಳ ಹಾವಳಿ ಗ್ರಾಮೀಣ ಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ. ನಗರಕ್ಕೂ ಕಾಡು ಪ್ರಾಣಿಗಳು ಲಗ್ಗೆ ಇಡುತ್ತಿದ್ದು, ಮಡಿಕೇರಿ ನಗರದ ಗೌಡ ಸಮಾಜದ ಮನೆಗಳ ಬಳಿ ನಿತ್ಯ ಮಂಗಗಳ ಹಿಂಡು ಸಂಚರಿಸುತ್ತಿವೆ.
ಬೆಳಗ್ಗೆ ಮನೆಯ ಮುಂದೆ ಬಂದ ಮಂಗಗಳಿಗೆ ಮನೆಯೊಡತಿ ಸೌಮ್ಯ ಉಮೇಶ್ ಅವರು ಕೊಡಗಿನ ಅಕ್ಕಿ ರೊಟ್ಟಿ ಕೊಟ್ಟು ಕಳುಹಿಸಿದ್ದಾರೆ. ರೊಟ್ಟಿಯನ್ನು ಕಸಿದು ಮರವೇರಿದ ಮಂಗ ರೊಟ್ಟಿಯ ರುಚಿ ನೋಡಿದೆ. ಆದರೆ ಮಂಗಗಳ ಮಂಗನಾಟದಿಂದ ಪುಟಾಣಿ ಮಕ್ಕಳಿಗೆ ಅಪಾಯವಾಗಬಹುದೆನ್ನುವ ಆತಂಕವಿದೆ.