ಕಾಂಗ್ರೆಸ್ ನಿಂದ ರಾಜೀವ್ ಗಾಂಧಿ ಹಾಗೂ ಅರಸು ಜನ್ಮ ದಿನಾಚರಣೆ

ಮಡಿಕೇರಿ ಆ.20 : ಮಹಾತ್ಮಾಗಾಂಧಿಯವರ ಗ್ರಾಮ ರಾಜ್ಯವೇ ರಾಮರಾಜ್ಯ ಎಂಬ ಕಲ್ಪನೆಯನ್ನು ಸಾಕಾರಗೊಳಿಸಿದ ಕೀರ್ತಿ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರಿಗೆ ಸಲ್ಲುತ್ತದೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕೊಡಗು ಜಿಲ್ಲಾ ಸಂಯೋಜಕ ತೆನ್ನೀರಾ ಮೈನಾ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ರಾಜಿವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಹಯೋಗದಲ್ಲಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ರಾಜೀವ್ ಗಾಂಧಿ ಮತ್ತು ದೇವರಾಜು ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿ, ಡಿಜಿಟಲ್ ಇಂಡಿಯಾದ ನಿರ್ಮಾರ್ತೃ ರಾಜೀವ್ ಗಾಂಧಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ರಾಜೀವ್ ಗಾಂಧಿ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತಂದು ಅನಕ್ಷರತೆಯ ನಿವಾರಣೆ ಮಾಡಿ ಭಾರತವನ್ನು ಬಲಿಷ್ಟ ರಾಷ್ಟ್ರವನ್ನಾಗಿ ಮಾಡಿದರು. ಅವರ ಆದರ್ಶಗಳನ್ನು ಪ್ರತಿಯೊಬ್ಬ ಭಾರತೀಯರು ಪಾಲಿಸಬೇಕೆಂದು ಕರೆ ನೀಡಿದರು.
ಹಿರಿಯ ಕಾಂಗ್ರೆಸ್ ಮುಖಂಡ ಟಿ.ಪಿ.ರಮೇಶ್ ಮಾತನಾಡಿ, ದೇವರಾಜ್ ಅರಸು ಹಾಗೂ ರಾಜೀವ್ ಗಾಂಧಿ ಅವರು ನೀಡಿದ ಕೊಡುಗೆಗಳಿಂದ ಭಾರತ ಮತ್ತು ಕರ್ನಾಟಕ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರಿದಿದೆ ಎಂದರು.
ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ಪ್ರಮುಖರಾದ ನಟೇಶ್ ಗೌಡ, ಡಾ. ಜಯಂತಿ ಶೆಟ್ಟಿ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ನಾಪೆÇೀಕ್ಲು ಅಧ್ಯಕ್ಷ ಇಸ್ಮಾಯಿಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಯುವಕಾಂಗ್ರೆಸ್ ಅಧ್ಯಕ್ಷ ಹನೀಫ್ ಸಂಪಾಜೆ, ಕಿಸಾನ್ ಘಟಕದ ಅಧ್ಯಕ್ಷ ನೆರವಂಡ ಉಮೇಶ್, ಸೇವಾದಳ ಅಧ್ಯಕ್ಷ ಚಿಲ್ಲುವಂಡ ಕಾವೇರಪ್ಪ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಹೊಸೂರು ಸೂರಜ್, ನಗರಾಧ್ಯಕ್ಷ ಅಬ್ದುಲ್ ರಜಾಕ್, ಮುಖಂಡರಾದ ಚುಮ್ಮಿದೇವಯ್ಯ, ಟಿ. ಎಂ. ಅಯ್ಯಪ್ಪ, ಟಿ. ಪಿ. ರಾಜೇಂದ್ರ, ಕೋಡಿರ ವಿನೋದ್, ಪಿ. ಎಲ್. ಸುರೇಶ್, ಎಂ. ಎ. ಉಸ್ಮಾನ್, ಜುಲೇಕಾಬಿ, ಪ್ರಕಾಶ್ ಆಚಾರ್ಯ, ತಜಸುಮ್, ಪುಲಿಯಂಡ ಜಗದೀಶ್, ಉದಯ್ ಕುಮಾರ್, ಪ್ರಭು ರೈ, ಪುಷ್ಪ ಪೂಣಚ್ಚ, ಆರ್. ಪಿ. ಚಂದ್ರಶೇಖರ್, ನಂದಿನೆರವಂಡ ಮಧು, ಬಂಗಾರು ಕೋಡಿ ಪುರುಷೋತ್ತಮ, ಮೀನಾಕ್ಷಿ, ಸದಾ ಮುದ್ದಪ್ಪ, ಚುಮ್ಮಣ್ಣ, ಸುನೀಲ್ ಪತ್ರಾವೋ , ಕೊಟ್ಟಮುಡಿ ಹಂಸ, ಶಾಫಿ ಕೊಟ್ಟಮುಡಿ, ಯಡಪಾಲ ಶಾಫಿ, ಮೋಹನ್ ದಾಸ್, ಸದಾ ಡನ್ನಿಸ್, ಬಾಲಚಂದ್ರ ನಾಯರ್, ಹ್ಯಾರಿಸ್ ಚೆಟ್ಟಿಮಾನಿ, ಕಾನೆಹಿತ್ಲು ಮೊಣ್ಣಪ್ಪ, ಫ್ಯಾನ್ಸಿ, ಮುದ್ದುರಾಜ್, ನಾಪಂಡ ರವಿ, ಸ್ವರ್ಣಲತಾ, ಸುದಯ್ ನಾಣಯ್ಯ, ಖಲೀಲ್ ಬಾಷ ಸಿರಾಜ್ ಇಸ್ಮಾಯಿಲ್, ತೊಂಡಿಯಂಡ ಕುಶ, ತೀರ್ಥ ಕುಮಾರ್ ನಾಚಪ್ಪ, ಮೀನಾಜ್ ಪ್ರವೀಣ್, ಜಗದೀಶ್, ರಾಹುಲ್ ಮಾರ್ಷಲ್, ಜಿಯೋ, ರಾಣಿ ಮತ್ತಿತರರು ಹಾಜರಿದ್ದರು.



