ಯುವ ಕಾಂಗ್ರೆಸ್ ನಿಂದ ರಾಜೀವ್ ನೆನಪು : ರಾಜೀವ್ ಗಾಂಧಿ ಯುವವರ್ಗಕ್ಕೆ ಶಕ್ತಿ ತುಂಬಿದರು : ಹನೀಫ್ ಶ್ಲಾಘನೆ

ಮಡಿಕೇರಿ ಆ.20 : ದೇಶದ ಯುವ ಸಮೂಹಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಶಕ್ತಿ ತುಂಬಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಆದರ್ಶಗಳು ಇಂದಿಗೂ ಜೀವಂತವೆಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಎಸ್.ಪಿ ಹೇಳಿದ್ದಾರೆ.
ನಗರದಲ್ಲಿ ಯುವ ಕಾಂಗ್ರೆಸ್ ವತಿಯಿಂದ ನಡೆದ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶವನ್ನು ತಾಂತ್ರಿಕವಾಗಿ ಉನ್ನತ ಮಟ್ಟಕ್ಕೇರಿಸಿದ ದೂರದೃಷ್ಟಿತ್ವದ ನಾಯಕ ರಾಜೀವ್ ಗಾಂಧಿ ಅವರು ಇಂದಿನ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ದೀನ, ದಲಿತರ, ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಶ್ರಮಿಸಿದ ದೇವರಾಜ ಅರಸು ಅವರ ಸೇವೆ ಸ್ಮರಣೀಯವೆಂದು ಹನೀಫ್ ಬಣ್ಣಿಸಿದರು.
ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ಶಾಫಿ ಕೊಟ್ಟಮುಡಿ, ನಾಪೋಕ್ಲು ಬ್ಲಾಕ್ ಯುವ ಅಧ್ಯಕ್ಷ ಸುದೈ ನಾಣಯ್ಯ, ಮಡಿಕೇರಿ ಬ್ಲಾಕ್ ಯುವ ಅಧ್ಯಕ್ಷ ರವಿ ನಾಪಂಡ, ಮಡಿಕೇರಿ ನಗರ ಯುವ ಅಧ್ಯಕ್ಷ ಸದಾಮುದ್ದಪ್ಪ, ವಿರಾಜಪೇಟೆ ವಿಧಾನಸಭಾ ಯುವ ಕಾರ್ಯದರ್ಶಿ ಸಿರಾಜ್ ಪರವಂಡ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ರಾಹುಲ್ ಮಾರ್ಷಲ್, ಜಿಯೋ ಮಡಿಕೇರಿ, ಅನಿಲ್ ಯಾದವ್, ಮುದ್ದುರಾಜ್, ಡಿಸಿಸಿ ಸದಸ್ಯ ಬಾಲಚಂದ್ರ ನಾಯರ್ ಮತ್ತಿತರರು ಉಪಸ್ಥಿತರಿದ್ದು ನಾಯಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
