ಕೊಡಗಿನಲ್ಲಿ ಗುರುವಾರ 39 ಪ್ರಕರಣ ಪತ್ತೆ : ಸೋಂಕಿತರ ಸಂಖ್ಯೆ 1125ಕ್ಕೆ ಏರಿಕೆ

20/08/2020

ಮಡಿಕೇರಿ ಆ.20 : ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8 ಗಂಟೆ ವೇಳೆಗೆ 12 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 27 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು 39 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಸೋಮವಾರಪೇಟೆ ಹೊಸತೋಟ ಅಂಗನವಾಡಿ ಬಳಿಯ 24 ವರ್ಷದ ಮಹಿಳೆ. ವಿರಾಜಪೇಟೆ ವಿಜಯನಗರದ ಚೋಟಾ ಚಾಂಪಿಯನ್ ನರ್ಸರಿ ಶಾಲೆ ಬಳಿಯ 27 ವರ್ಷದ ಪುರುಷ. ಮೂರ್ನಾಡು ಪಂಚರತ್ನ ಹೊಟೇಲ್ ಬಳಿಯ 45 ವರ್ಷದ ಪುರುಷ ಮತ್ತು 36 ವರ್ಷದ ಮಹಿಳೆ. ವಿರಾಜಪೇಟೆ ಪೆÇನ್ನಂಪೇಟೆಯ ಜೋಡ್ ಪಾತಿ ಬಳಿಯ 31 ವರ್ಷದ ಪುರುಷ. ಅರೆಕಾಡು ಗ್ರಾಮ ಜಯಜೀವ ರಾಮ್ ಕಾಲೋನಿಯ 20 ವರ್ಷದ ಪುರುಷ. ವಿರಾಜಪೇಟೆ ವಿಜಯನಗರ ಸುರೂರ್ ಲಾಡ್ಜ್ ಬಳಿಯ 39 ವರ್ಷದ ಮಹಿಳೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮೇಲಿನ ಗೌಡ ಸಮಾಜ ಬಳಿಯ 30 ವರ್ಷದ ಮಹಿಳೆ. ಮಡಿಕೇರಿ ಕಾಲೇಜು ರಸ್ತೆಯ 61 ವರ್ಷದ ಪುರುಷ. ನೆಲ್ಲಿ ಹುದಿಕೇರಿ ರಿವರ್ ಸೈಡಿನ 21 ವರ್ಷದ ಮಹಿಳೆ. ಕುಶಾಲನಗರ ರಾಧಾಕೃಷ್ಣ ಬಡಾವಣೆಯ 22 ಮತ್ತು 50 ವರ್ಷದ ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ.
ಅರಪಟ್ಟು ಕಡಂಗಮರೂರು ಮಸೀದಿ ಬಳಿಯ 37 ವರ್ಷದ ಮಹಿಳೆ. ಚೆಯ್ಯಂಡಾಣೆ ಯಡಪಾಲ ಗ್ರಾಮದ ಮಸೀದಿ ಬಳಿಯ 38 ವರ್ಷದ ಮಹಿಳೆ. ಚೆಯ್ಯಂಡಾಣೆ ನೆರಿಯಂದಡ ಗ್ರಾಮದ 33 ವರ್ಷದ ಮಹಿಳೆ. ಕೊಳಕೇರಿ ಗ್ರಾಮದ ಸಮಾಧಿ ಬಳಿಯ 23 ವರ್ಷದ ಮಹಿಳೆ. ವಿರಾಜಪೇಟೆ ವಿ.ಬಾಡಗದ 54 ಮತ್ತು 23 ವರ್ಷದ ಪುರುಷರು. ಕುಶಾಲನಗರ ಮುಳ್ಳುಸೋಗೆ 1ನೇ ಬ್ಲಾಕಿನ 53 ಮತ್ತು 49 ವರ್ಷದ ಪುರುಷರು. ಕುಶಾಲನಗರ ಬಲಮುರಿ ದೇವಾಲಯ ಹಿಂಭಾಗದ 48 ವರ್ಷದ ಮಹಿಳೆ. ಕುಶಾಲನಗರ ರಾಧಾಕೃಷ್ಣ ಬಡಾವಣೆಯ ಬಸವೇಶ್ವರ ಟ್ರೇಡರ್ಸ್ ಬಳಿಯ 33 ವರ್ಷದ ಪುರುಷ. ಕುಶಾಲನಗರ ಬಿ.ಎಂ ರಸ್ತೆಯ ಬಾಟಾ ಶೋ ರೂಂ ಎದುರಿನ 24 ವರ್ಷದ ಪುರುಷ. ವಿರಾಜಪೇಟೆ ಮೈತಾಡಿ ಲೈನ್ ಮನೆಯ 26 ವರ್ಷದ ಪುರುಷ.
ಸೋಮವಾರಪೇಟೆ ಬಿಳಿಗೇರಿ ಚೆಂಗಪ್ಪ ಗೌಡ ಲೈನ್ ಮನೆಯ 7 ವರ್ಷದ ಬಾಲಕ. ಸೋಮವಾರಪೇಟೆ ಹಾನಗಲ್ ಅಂಚೆಯ ಟಿ.ಶೆಟ್ಟಳ್ಳಿಯ 70 ವರ್ಷದ ಮಹಿಳೆ. ಸೋಮವಾರಪೇಟೆ ಹಾನಗಲ್ ಬಾಣೆಯ 56 ವರ್ಷದ ಮಹಿಳೆ. ಸೋಮವಾರಪೇಟೆ ಅರೆಯೂರುವಿನ 16 ವರ್ಷದ ಬಾಲಕ. ಸೋಮವಾರಪೇಟೆ ತಾಳತ್ರಶೆಟ್ಟಳ್ಳಿಯ 58 ವರ್ಷದ ಪುರುಷ. ಶನಿವಾರಸಂತೆ ಡಿಸಿಸಿ ಬ್ಯಾಂಕ್ ರಸ್ತೆಯ ಸೊಸೈಟಿ ಬಳಿಯ 26 ವರ್ಷದ ಪುರುಷ. ಸೋಮವಾರಪೇಟೆ ಗಂಧದಕೋಟೆ ಗ್ರಾಮದ 54 ವರ್ಷದ ಪುರುಷ ಮತ್ತು 21 ವರ್ಷದ ಮಹಿಳೆ. ಕುಶಾಲನಗರ ವಿ.ಆರ್.ಎಲ್ ರಸ್ತೆಯ ಬಾಪೂಜಿ ಬಡಾವಣೆಯ 37 ವರ್ಷದ ಮಹಿಳೆ. ಕುಶಾಲನಗರ ಕೂಡಿಗೆ ಸೊಸೈಟಿ ಬಳಿಯ 48 ವರ್ಷದ ಮಹಿಳೆ. ಕುಶಾಲನಗರ ಸುಂದರನಗರದ 19 ವರ್ಷದ ಮಹಿಳೆ. ವಿರಾಜಪೇಟೆ ಪೆÇಲೀಸ್ ವಸತಿ ಗೃಹದ 29 ವರ್ಷದ ಪುರುಷ. ಸೋಮವಾರಪೇಟೆ ಹಾಲೇರಿ ತತ್ತಿಬಾಣೆ ಪೈಸಾರಿಯ 48 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮೇಲಿನ ಗೌಡ ಸಮಾಜದ ರಾಘವೇಂದ್ರ ದೇವಾಲಯ ರಸ್ತೆಯ 27 ವರ್ಷದ ಪುರುಷ. ಹಾಸನ ಜಿಲ್ಲೆಯ 23 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1125 ಆಗಿದ್ದು, 774 ಮಂದಿ ಗುಣಮುಖರಾಗಿದ್ದಾರೆ. 337 ಸಕ್ರಿಯ ಪ್ರಕರಣಗಳಿದ್ದು, 14 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 275 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಸಾರ್ವಜನಿಕರ ಗಮನಕ್ಕೆ; ಎಸ್‍ಆರ್‍ಎಫ್ ಐಡಿ ಬಳಸಿಕೊಂಡು ಕರ್ನಾಟಕ ಸರ್ಕಾರದ ವೆಬ್‍ಪೆ https://www.covidwar.karnataka.gov.in/service1 ಮೂಲಕ ಕೋವಿಡ್ ಪರೀಕ್ಷಾ ಫಲಿತಾಂಶವನ್ನು ತಿಳಿಯಬಹುದಾಗಿದೆ. ಆದ್ದರಿಂದ ಕೊಡಗು ಜಿಲ್ಲಾ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುತ್ತಿದ್ದ ಜಿಲ್ಲೆಯ ಕೋವಿಡ್ ಪರೀಕ್ಷಾ ಫಲಿತಾಂಶವನ್ನು ಮುಂದೆ ಪ್ರಕಟಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.