ಕೊಡಗಿನಲ್ಲಿ ಇಲ್ಲಿಯವರೆಗೆ ಒಟ್ಟು 1125 ಸೋಂಕಿತರು ಪತ್ತೆ

ಮಡಿಕೇರಿ : ಕೊಡಗು ಕೋವಿಡ್ ಆಸ್ಪತ್ರೆಯಿಂದ ಇಂದು 30 ಸೋಂಕಿತರು ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 1125 ಮಂದಿ ಸೋಂಕಿತರು ಪತ್ತೆಯಾಗಿದ್ದು, 804 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಮೃತರ ಸಂಖ್ಯೆ 16 ಕ್ಕೆ ಏರಿಕೆಯಾಗಿದ್ದು, 305 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿರುವ ನಿಯಂತ್ರಿತ ಪ್ರದೇಶಗಳ ಸಂಖ್ಯೆ 275 ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಗುರುವಾರ ಬೆಳಗ್ಗೆ ಜಿಲ್ಲೆಯಲ್ಲಿ 12 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದರೆ, ಮಧ್ಯಾಹ್ನದ ವೇಳೆಗೆ ಮತ್ತೆ 27 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆ ಹೊಸತೋಟ ಅಂಗನವಾಡಿ ಬಳಿಯ 24ವರ್ಷದ ಮಹಿಳೆ, ವೀರಾಜಪೇಟೆ ವಿಜಯನಗರದ ಚೋಟಾ ಚಾಂಪಿಯನ್ ನರ್ಸರಿ ಶಾಲೆ ಬಳಿಯ 27 ವರ್ಷದ ಪುರುಷ, ಮೂರ್ನಾಡು ಪಂಚರತ್ನ ಹೊಟೇಲ್ ಬಳಿಯ 45 ವರ್ಷದ ಪುರುಷ ಮತ್ತು 36 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ವೀರಾಜಪೇಟೆ ಪೊನ್ನಂಪೇಟೆಯ ಜೋಡುಬೀಟಿ ಬಳಿಯ 31 ವರ್ಷದ ಪುರುಷ, ಅರೆಕಾಡು ಗ್ರಾಮ ಜಯಜೀವ ರಾಮ್ ಕಾಲೋನಿಯ 20 ವರ್ಷದ ಪುರುಷ, ವೀರಾಜಪೇಟೆ ವಿಜಯನಗರ ಸುರೂರ್ ಲಾಡ್ಜ್ ಬಳಿಯ 39 ವರ್ಷದ ಮಹಿಳೆಯಲ್ಲಿ ಸೋಂಕು ಗೋಚರಿಸಿದೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮೇಲಿನ ಗೌಡ ಸಮಾಜ ಬಳಿಯ 30 ವರ್ಷದ ಮಹಿಳೆ, ಮಡಿಕೇರಿ ಕಾಲೇಜು ರಸ್ತೆಯ 61 ವರ್ಷದ ಪುರುಷ, ನೆಲ್ಲಿ ಹುದಿಕೇರಿ ಹೊಳೆಕರೆಯ 21 ವರ್ಷದ ಮಹಿಳೆ,ಕುಶಾಲನಗರ ರಾಧಾಕೃಷ್ಣ ಬಡಾವಣೆಯ 22 ಮತ್ತು 50 ವರ್ಷದ ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ.
ಗುರುವಾರ ಮಧ್ಯಾಹ್ನ ಅರಪಟ್ಟು ಕಡಂಗಮರೂರು ಮಸೀದಿ ಬಳಿಯ 37 ವರ್ಷದ ಮಹಿಳೆ, ಚೆಯ್ಯಂಡಾಣೆ ಎಡಪಾಲ ಗ್ರಾಮದ ಮಸೀದಿ ಬಳಿಯ 38 ವರ್ಷದ ಮಹಿಳೆ,ಚೆಯ್ಯಂಡಾಣೆ ನಯಂದಡ ಗ್ರಾಮದ 33 ವರ್ಷದ ಮಹಿಳೆ, ಕೊಳಕೇರಿ ಗ್ರಾಮದ ಸಮಾಧಿ ಬಳಿಯ 23 ವರ್ಷದ ಮಹಿಳೆ, ವೀರಾಜಪೇಟೆ ವಿ.ಬಾಡಗದ 54 ಮತ್ತು 23 ವರ್ಷದ ಪುರುಷರಲ್ಲಿ ಸೋಂಕು ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕುಶಾಲನಗರ ಮುಳ್ಳುಸೋಗೆ 1ನೇ ಬ್ಲಾಕ್‍ನ 53 ಮತ್ತು 49 ವರ್ಷದ ಪುರುಷರು, ಕುಶಾಲನಗರ ಬಲಮುರಿ ದೇವಾಲಯ ಹಿಂಭಾಗದ 48 ವರ್ಷದ ಮಹಿಳೆ, ಕುಶಾಲನಗರ ರಾಧಾಕೃಷ್ಣ ಬಡಾವಣೆಯ ಬಸವೇಶ್ವರ ಟ್ರೇಡರ್ಸ್ ಬಳಿಯ 33 ವರ್ಷದ ಪುರುಷ, ಕುಶಾಲನಗರ ಬಿ.ಎಂ ರಸ್ತೆಯ ಬಾಟಾ ಶೋ ರೂಂ ಎದುರಿನ 24 ವರ್ಷದ ಪುರುಷ, ವೀರಾಜಪೇಟೆ ಮೈತಾಡಿ ಲೈನ್ ಮನೆಯ 26 ವರ್ಷದ ಪುರುಷನಲ್ಲೂ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆ ಬಿಳಿಗೇರಿ ಚೆಂಗಪ್ಪ ಗೌಡ ಲೈನ್ ಮನೆಯ 7 ವರ್ಷದ ಬಾಲಕ, ಹಾನಗಲ್ ಟಿ.ಶೆಟ್ಟಳ್ಳಿಯ 70 ವರ್ಷದ ಮಹಿಳೆ, ಹಾನಗಲ್ ಬಾಣೆಯ 56 ವರ್ಷದ ಮಹಿಳೆ, ಅರೆಯೂರುವಿನ 16 ವರ್ಷದ ಬಾಲಕ, ತಳ್ತರೆಶೆಟ್ಟಳ್ಳಿಯ 58 ವರ್ಷದ ಪುರುಷ, ಶನಿವಾರಸಂತೆ ಡಿಸಿಸಿ ಬ್ಯಾಂಕ್ ರಸ್ತೆಯ ಸೊಸೈಟಿ ಬಳಿಯ 26 ವರ್ಷದ ಪುರುಷ, ಕುಶಾಲನಗರ ಗಂಧದಕೋಟೆ ಗ್ರಾಮದ 54 ವರ್ಷದ ಪುರುಷ ಮತ್ತು 21 ವರ್ಷದ ಮಹಿಳೆಯಲ್ಲಿ ಸೋಂಕು ಗೋಚರಿಸಿರುವುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಕುಶಾಲನಗರ ವಿ.ಆರ್.ಎಲ್ ರಸ್ತೆಯ ಬಾಪೂಜಿ ಬಡಾವಣೆಯ 37 ವರ್ಷದ ಮಹಿಳೆ, ಕೂಡಿಗೆ ಸೊಸೈಟಿ ಬಳಿಯ 48 ವರ್ಷದ ಮಹಿಳೆ, ಕುಶಾಲನಗರ ಸುಂದರನಗರದ 19 ವರ್ಷದ ಮಹಿಳೆ, ವೀರಾಜಪೇಟೆ ಪೊಲೀಸ್ ವಸತಿ ಗೃಹದ 29 ವರ್ಷದ ಪುರುಷ, ಸೋಮವಾರಪೇಟೆ ಹಾಲೇರಿ ತತ್ತಿಬಾಣೆ ಪೈಸಾರಿಯ 48 ವರ್ಷದ ಪುರುಷ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮೇಲಿನ ಗೌಡ ಸಮಾಜದ ರಾಘವೇಂದ್ರ ದೇವಾಲಯ ರಸ್ತೆಯ 27 ವರ್ಷದ ಪುರುಷ, ಹಾಸನ ಜಿಲ್ಲೆಯ 23 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.
ಇದರೊಂದಿಗೆ ಜಿಲೆಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 1125ರಷ್ಟಾಗಿದ್ದು, ಇವರಲ್ಲಿ 774 ಮಂದಿ ಗುಣಮುಖರಾಗಿದ್ದಾರೆ. 337 ಸಕ್ರಿಯ ಪ್ರಕರಣಗಳಿದ್ದು, 15 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 275ರಷ್ಟಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.