ಕೊಡಗಿನಲ್ಲಿ 16 ಹೊಸ ಕೋವಿಡ್ ಪ್ರಕರಣ ಪತ್ತೆ

21/08/2020

ಮಡಿಕೇರಿ ಆ. 21 : ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆ ವೇಳೆಗೆ 16 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.
ಪಿರಿಯಾಪಟ್ಟಣ ನವಿಲೂರಿನ 25 ವರ್ಷದ ಪುರುಷ.
ಕುಶಾಲನಗರ ಗುಮ್ಮನಕೊಲ್ಲಿ ಚೌಡೇಶ್ವರಿ ಬಡಾವಣೆಯ 60 ವರ್ಷದ ಮಹಿಳೆ.
ಕುಶಾಲನಗರ ಕೂಡುಮಂಗಳೂರು ದೊಡ್ಡತ್ತೂರು ಗ್ರಾಮದ 40 ವರ್ಷದ ಮಹಿಳೆ.
ಚೆಟ್ಟಳ್ಳಿ ಅಭ್ಯತ್ ಮಂಗಲ ಶ್ರೀಮಂಗಲ ಎಸ್ಟೇಟಿನ 49 ವರ್ಷದ ಮಹಿಳೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಕೊಡ್ಲಿಪೇಟೆ ಕಟ್ಟೆಪುರದ 39 ವರ್ಷದ ಪುರುಷ.
ಮಡಿಕೇರಿ ಕಡಗದಾಳು ಗ್ರೀನ್ಸ್ ವಿಲ್ಲಾದ 42 ವರ್ಷದ ಮಹಿಳೆ.
ಸುಂಟಿಕೊಪ್ಪ ಚೆಟ್ಟಳ್ಳಿ ರಸ್ತೆಯ ಶ್ರೀದೇವಿ ಲೇಔಟಿನ 53 ವರ್ಷದ ಪುರುಷ.
ಮಾದಾಪುರ ಕಾರೆಕಾಡ್ ಗ್ರಾಮದ 45 ವರ್ಷದ ಪುರುಷ ಮತ್ತು 42 ವರ್ಷದ ಮಹಿಳೆ.
ಮಾದಾಪುರ ಇಗ್ಗೋಡ್ಲುವಿನ ಸರ್ಕಾರಿ ಶಾಲೆ ಬಳಿಯ ಜಂಬೂರು ಬಾಣೆಯ 40, 48, 21 ವರ್ಷದ ಮಹಿಳೆಯರು, 21 ಮತ್ತು 26 ವರ್ಷದ ಪುರುಷರು.
ಸೋಮವಾರಪೇಟೆ ಗರಗಂದೂರು ಗ್ರಾಮ ಮಲ್ಲಿಕಾರ್ಜುನ ಕಾಲೋನಿಯ 21 ವರ್ಷದ ಪುರುಷ ಮತ್ತು 51 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1141 ಆಗಿದ್ದು, 804 ಮಂದಿ ಗುಣಮುಖರಾಗಿದ್ದಾರೆ. 321 ಸಕ್ರಿಯ ಪ್ರಕರಣಗಳಿದ್ದು, 16 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 269 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.