ಸ್ವಚ್ಛ ಸರ್ವೇಕ್ಷಣದಲ್ಲಿ ಮೈಸೂರು ಪ್ರಥಮ

August 21, 2020

ನವದೆಹಲಿ ಆ.20 : ಕೇಂದ್ರ ಸರ್ಕಾರ “ಸ್ವಚ್ಛ ಸರ್ವೇಕ್ಷಣ 2020” ಸಮೀಕ್ಷೆಯನ್ನು ಗುರುವಾರ ಪ್ರಕಟಿಸಿದ್ದು, 3 ರಿಂದ 10 ಲಕ್ಷ ಜನಸಂಖ್ಯೆಯುಳ್ಳ ನಗರಗಳ ವಿಭಾಗದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಮೊದಲ ಸ್ಥಾನ ಪಡೆದಿದೆ.
ರಾಜಧಾನಿ ಬೆಂಗಳೂರು ನಗರಕ್ಕೆ ಅತ್ಯುತ್ತಮ ಸ್ವ ಸುಸ್ಥಿರ ನಗರ ಪ್ರಶಸ್ತಿ ದೊರೆತಿದೆ. ಈ ಮೂಲಕ ರಾಜ್ಯಕ್ಕೆ ಎರಡು ಪ್ರಮುಖ ಪ್ರಶಸ್ತಿಗಳು ದೊರೆತಿವೆ.
2018 ರಲ್ಲೂ ಈ ವಿಭಾಗದಲ್ಲಿ ಮೈಸೂರು ಅಗ್ರಸ್ಥಾನದಲ್ಲಿತ್ತು. ಆದರೆ ಸಮಗ್ರ ವಿಭಾಗದಲ್ಲಿ ಕಳೆದ ಬಾರಿ ಮೂರನೇ ಸ್ಥಾನದಲ್ಲಿದ್ದ ಮೈಸೂರು ಈ ಬಾರಿ ಐದನೇ ಸ್ಥಆನಕ್ಕೆ ಕುಸಿದಿದೆ. 2015 ಮತ್ತು 2016ರಲ್ಲಿ ದೇಶದ ಅತ್ಯಂತ ಸ್ವಚ್ಚ ನಗರ ಎಂಬ ಕೀರ್ತಿಗೆ ಭಾಜನವಾಗಿದ್ದ ಮೈಸೂರು ಕಳೆದ ಬಾರಿ ಮೂರನೇ ಸ್ಥಾನದಲ್ಲಿತ್ತು.
ಇನ್ನು ಬೆಂಗಳೂರಿಗೆ ಅತ್ಯುತ್ತಮ ಸ್ವ ಸುಸ್ಥಿರ ನಗರ ಪ್ರಶಸ್ತಿಲಭಿಸಿದ್ದು 10 ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆ ಇರುವ ಆಯ್ದ 47 ನಗರಗಳ ಆಯ್ಕೆ ಮಾಡಿದ್ದು ಅವುಗಳು ಕಸ ವಿಲೇವಾರಿ ಹಾಗೂ ನಿರ್ವಹಣೆಗಾಗಿ ಅಳವಡಿಸಿಕೊಂಡ ಮಾರ್ಗಗಳನ್ನು ಆಧರಿಸಿ ಈ ಪ್ರಶಸ್ತಿ ನೀಡಲಾಗಿದೆ. 47 ನಗರಗಳ ಪೈಕಿ ಬೆಂಗಳೂರು 37ನೇ ಸ್ಥಾನದಲ್ಲಿದೆ.

error: Content is protected !!