ಆ. 25 ರಂದು ಸೋಮವಾರಪೇಟೆಯ ವಿವಿಧ ದೇವಾಲಯಗಳಲ್ಲಿ ವೀರಭದ್ರೇಶ್ವರ ಜಯಂತೋತ್ಸವ

21/08/2020

ಮಡಿಕೇರಿ ಆ. 21 : ಸೋಮವಾರಪೇಟೆ ತಾಲೂಕಿನ ವಿವಿಧ ವೀರಭದ್ರೇಶ್ವರ ದೇವಾಲಯಗಳಲ್ಲಿ ಆ. 25 ರಂದು ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾ ವೀರಶೈವ ಅರ್ಚಕ ಮತ್ತು ಪುರೋಹಿತ ಸಂಘದ ಕಾರ್ಯದರ್ಶಿ ಸೋಮಶೇಖರ್ ಶಾಸ್ತ್ರಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗು ಜಿಲ್ಲಾ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಸಂಘ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಹಾಗೂ ವಿರಶೈವ ಲಿಂಗಾಯಿತ ಸಂಘಟನಾ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿಯವರ ಸಾನಿದ್ಯದಲ್ಲಿ ವೀರಭದ್ರೇಶ್ವರ ಜಯಂತೋತ್ಸವ ಹಾಗೂ ಕರೋನಾ ನಿಗ್ರಹ ಮತ್ತು ಪ್ರತಿ ವರ್ಷ ಪ್ರಕೃತಿ ವಿಕೋಪದಿಂದ ನಲುಗುತ್ತಿರುವ ಕೊಡಗು ಜಿಲ್ಲೆಯ ಸಂರಕ್ಷಣೆ ಮತ್ತು ಸುಭಿಕ್ಷಾ ಕೊಡಗು ನಿರ್ಮಾಣಕ್ಕೆ ಸಂಕಲ್ಪ ತೊಟ್ಟು ವಿಶೇಷ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ಅಂದು ಸೊಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಬೆಳಗ್ಗೆ 9 ಗಂಟೆಗೆ, ನೀರುಗುಂದದಲ್ಲಿ 10ಗಂಟೆಗೆ, ಬೆಂಬಳೂರು 11 ಗಂಟೆಗೆ, ಮುದ್ದಿನಕಟ್ಟೆ ಮಠ 12 ಗಂಟೆಗೆ, ಮನೆಹಳ್ಳಿ ಮಠ ಮದ್ಯಾಹ್ನಾ 1 ಗಂಟೆಗೆ, ಗೌಡಳ್ಳಿಯಲ್ಲಿ 2 ಗಂಟೆಗೆ, ಕೋಟೆ ಊರು 3 ಗಂಟೆಗೆ, ನೇರುಗಳಲೆ ವೀರಭದ್ರೇಶ್ವರ ದೇವಾಲಯಗಳಲ್ಲಿ ಸಂಜೆ 4 ಗಂಟೆಗೆ ವಿಶೇಷ ಪೂಜೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹೀತಿಗಾಗಿ 9481059223/9148946095 ಈ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದ್ದಾರೆ.