ಕೊಡಗಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1154 ಏರಿಕೆ : 804 ಮಂದಿ ಗುಣಮುಖ

August 21, 2020

ಮಡಿಕೇರಿ ಆ. 21 : ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆ ವೇಳೆಗೆ 16 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 13 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು 29 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಪಿರಿಯಾಪಟ್ಟಣ ನವಿಲೂರಿನ 25 ವರ್ಷದ ಪುರುಷ. ಕುಶಾಲನಗರ ಗುಮ್ಮನಕೊಲ್ಲಿ ಚೌಡೇಶ್ವರಿ ಬಡಾವಣೆಯ 60 ವರ್ಷದ ಮಹಿಳೆ. ಕುಶಾಲನಗರ ಕೂಡುಮಂಗಳೂರು ದೊಡ್ಡತ್ತೂರು ಗ್ರಾಮದ 40 ವರ್ಷದ ಮಹಿಳೆ. ಚೆಟ್ಟಳ್ಳಿ ಅಭ್ಯತ್ ಮಂಗಲ ಶ್ರೀಮಂಗಲ ಎಸ್ಟೇಟಿನ 49 ವರ್ಷದ ಮಹಿಳೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಕೊಡ್ಲಿಪೇಟೆ ಕಟ್ಟೆಪುರದ 39 ವರ್ಷದ ಪುರುಷ. ಮಡಿಕೇರಿ ಕಡಗದಾಳು ಗ್ರೀನ್ಸ್ ವಿಲ್ಲಾದ 42 ವರ್ಷದ ಮಹಿಳೆ. ಸುಂಟಿಕೊಪ್ಪ ಚೆಟ್ಟಳ್ಳಿ ರಸ್ತೆಯ ಶ್ರೀದೇವಿ ಲೇಔಟಿನ 53 ವರ್ಷದ ಪುರುಷ. ಮಾದಾಪುರ ಕಾರೆಕಾಡ್ ಗ್ರಾಮದ 45 ವರ್ಷದ ಪುರುಷ ಮತ್ತು 42 ವರ್ಷದ ಮಹಿಳೆ. ಮಾದಾಪುರ ಇಗ್ಗೋಡ್ಲುವಿನ ಸರ್ಕಾರಿ ಶಾಲೆ ಬಳಿಯ ಜಂಬೂರು ಬಾಣೆಯ 40, 48, 21 ವರ್ಷದ ಮಹಿಳೆಯರು, 21 ಮತ್ತು 26 ವರ್ಷದ ಪುರುಷರು. ಸೋಮವಾರಪೇಟೆ ಗರಗಂದೂರು ಗ್ರಾಮ ಮಲ್ಲಿಕಾರ್ಜುನ ಕಾಲೋನಿಯ 21 ವರ್ಷದ ಪುರುಷ ಮತ್ತು 51 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆ ಕಲ್ಕಂದೂರು ಜಂಕ್ಷನ್ ಮಸೀದಿ ಬಳಿಯ 40 ವರ್ಷದ ಪುರುಷ. ಮಡಿಕೇರಿ ನಾಪೆÇೀಕ್ಲುವಿನ ಪಾರಣೆ ಅಂಚೆಯ ಕಲ್ಕಂದೂರು ಗ್ರಾಮದ 46 ವರ್ಷದ ಮಹಿಳೆ. ಕುಶಾಲನಗರ ಶಿರಂಗಾಲ ನೆಲ್ಲೂರು ಕೊಪ್ಪಲುವಿನ 35 ವರ್ಷದ ಪುರುಷ.
ಕಾನೂರುವಿನ ತುಚಮಕೇರಿ ಪೆÇೀಸ್ಟ್ ಆಫೀಸ್ ಬಳಿಯ 64 ವರ್ಷದ ಪುರುಷ. ವಿರಾಜಪೇಟೆ ವಿಜಯನಗರ 1 ನೇ ಹಂತದ 40 ವರ್ಷದ ಪುರುಷ ಮತ್ತು 27 ವರ್ಷದ ಮಹಿಳೆ. ವಿರಾಜಪೇಟೆ ಕಲ್ಲುಬಾಣೆ ಅಂಚೆಯ ಅರ್ಜಿ ಗ್ರಾಮದ 8 ವರ್ಷದ ಬಾಲಕಿ. ಮಡಿಕೇರಿ ನಾಪೆÇೀಕ್ಲುವಿನ ಮುಖ್ಯರಸ್ತೆಯ 65 ವರ್ಷದ ಮಹಿಳೆ. ಕುಶಾಲನಗರ ನೆಹರು ಬಡಾವಣೆಯ 59 ವರ್ಷದ ಮಹಿಳೆ. ಮಡಿಕೇರಿ ಕಾವೇರಿ ಲೇಔಟಿನ ಕೆನರಾ ಬ್ಯಾಂಕ್ ಬಳಿಯ 22 ವರ್ಷದ ಮಹಿಳೆ. ಕುಶಾಲನಗರ ಗಾಯತ್ರಿ ಚೌಲ್ಟ್ರಿ ಬಳಿಯ 29 ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಗೋಣಿಕೊಪ್ಪ ಆಸ್ಪತ್ರೆ ವಸತಿಗೃಹದ 36 ವರ್ಷದ ಪುರುಷ. ವಿರಾಜಪೇಟೆ ಬಿಳುಗುಂದ ಗ್ರಾಮದ ಭಧ್ರಕಾಳಿ ದೇವಾಲಯ ಬಳಿಯ 47 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಒಟ್ಟು 1154 ಆಗಿದ್ದು, 804 ಮಂದಿ ಗುಣಮುಖರಾಗಿದ್ದಾರೆ. 334 ಸಕ್ರಿಯ ಪ್ರಕರಣಗಳಿದ್ದು, 16 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 279 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

  

error: Content is protected !!