ಪೊನ್ನಂಪೇಟೆ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ವೃತ್ತಿಪರ ತರಬೇತಿ ಕಾರ್ಯಾಗಾರ

August 21, 2020

ಮಡಿಕೇರಿ ಆ. 21 : ಸ್ವಾವಲಂಬನೆ ಬದುಕಿಗೆ ಆಶ್ವಾಸನೆ, ಆಧಾರ ನೀಡಿ ಜಾತಿ ಧರ್ಮದ ವ್ಯತ್ಯಾಸ ಇಲ್ಲದೆ ಬದುಕಲು ಕಲಿಸುತ್ತಿರುವ ಸ್ವಾಮಿ ಶ್ರೀ ಬೋಧಸ್ವರೂಪಾನಂದಜೀ ಮಹರಾಜ್ ಅವರು ಅಭಿನಂದನಾರ್ಹರು ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ನುಡಿದರು.
ಪೆÇನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ನಡೆದ ಟೈಲರಿಂಗ್ ತರಬೇತಿ ಪಡೆದು ವೃತ್ತಿಯನ್ನು ಉದ್ಯಮವಾಗಿಸುವ ಕುರಿತು ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು.
ಕೊಡಗು ಜಿಲ್ಲೆಗೆ ಹಿಂದಿನ ಎರಡು ವರ್ಷಗಳ ಕಾಲ ಬಂದೊದಗಿದ ಮಹಾಮಳೆಯ ದುರಂತದ ಸಮಯದಲ್ಲಿ ಸಾವಿರಾರು ಜನರಿಗೆ ಸಹಾಯ ಹಸ್ತ ಕಲ್ಪಿಸಿದಲ್ಲದೆ ಜಿಲ್ಲೆಯ ಹಲವು ಕಡೆ ಉಚಿತ ಹೊಲಿಗೆ ತರಬೇತಿ, ಕಂಪ್ಯೂಟರ್ ತರಬೇತಿಗಳನ್ನು ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಕೊವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಕೂಡ ಜಿಲ್ಲೆಯ ಎಲ್ಲಾ ಭಾಗದ ಸಾವಿರಾರು ಜನರಿಗೆ ಆಹಾರ ಕಿಟ್ ನೀಡಿ ಮಾನವಿಯತೆ ಮೆರಿದ್ದಾರೆ ಎಂದರು.
ಉಪನ್ಯಾಸಕರಾಗಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿ ಅಮ್ಮತ್ತಿಯ ತುಷಾರ್ ಕುಲಕರ್ಣಿ ಮಾತನಾಡಿ, ಸ್ವಸಹಾಯ ಗುಂಪು ರಚಿಸಿಕೊಂಡು ಬಟ್ಟೆ ಹೊಲಿಯುವ ಗಾರ್ಮೆಂಟ್ಸ್ ತಯಾರಿಸಿ ಉತ್ತಮ ಗುಣಮಟ್ಟದ ರೆಡಿಮೇಡ್ ಬಟ್ಟೆಗಳನ್ನು ತಯಾರಿಸಿದರೆ ಅದಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ ಎಂದರು.
ಸರಿಯಾದ ರೀತಿಯಲ್ಲಿ ಪ್ರಯತ್ನಿಸಿದರೆ ಸಂಪನ್ಮೂಲ ಕೂಡಿಕೆಗೆ ಯಾವುದೇ ಸಮಸ್ಯೆಯಿಲ್ಲ. ಸರ್ಕಾರ ಸ್ವಸಹಾಯ ಸಂಸ್ಥೆಗಳಿಗೆ ತುಂಬಾ ಪೆÇ್ರೀತ್ಸಾಹ ನೀಡುತಿದ್ದು, ನಬಾರ್ಡ್ ಬ್ಯಾಂಕಿನ ಮೂಲಕ ಸಾಲ ಮತ್ತು ಪೆÇ್ರೀತ್ಸಾಹ ಧನ ಸಹಾಯ ನೀಡುತ್ತಿದ್ದು ಅದನ್ನು ಸದುಪಯೋಗಪಡಿಸಿಕೊಂಡು ಮಾರುಕಟ್ಟೆ ಕಂಡುಕೊಳ್ಳಲು ಸಲಹೆ ನೀಡಿದರು.
ಕೊಡಗು ಚೇಂಬರ್ ಆಫ್ ಕಾಮರ್ಸ್‍ನ ಉಪಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ತಾನು ಯಾರ ಹಂಗಿನಲ್ಲಿ ಬದುಕದೇ ಸ್ವಂತವಾಗಿ ಸಂಪಾದನೆ ಮಾಡಿ ಬದುಕಬೇಕು, ತನ್ನ ಗಂಡನ ಸಂಪಾದನೆಯೊಂದಿಗೆ ತಾನು ಆತನಿಗೆ ಆರ್ಥಿಕ ಸಹಕಾರ ನೀಡಲು ಸಾಧ್ಯವಾದರೆ ತಮ್ಮ ಬದುಕು ಸುಂದರ ಎನ್ನುವ ಕನಸು ಎಲ್ಲ ಗೃಹಿಣಿಯರಲ್ಲಿರುತ್ತದೆ. ಆ ಕನಸನ್ನು ಸಾಕಾರಗೊಳಿಸಿ ಕೊಳ್ಳುವ ನಿಟ್ಟಿನಲ್ಲಿ ಸ್ವಾಮಿಜಿಯವರು ತಮ್ಮನ್ನು ಟೈಲರ್‍ಗನ್ನಾಗಿ ಮಾಡಿ ತಮಗೆ ಹೊಲಿಗೆ ಯಂತ್ರವನ್ನು ಕೂಡ ಉಚಿತವಾಗಿ ನೀಡಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ನೀವು ತಯಾರಿಸಿದ ವಸ್ತುಗಳು ಉತ್ತಮ ಗುಣಮಟ್ಟದ್ದಾಗಿದ್ದರೆ ಮಾರುಕಟ್ಟೆ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಪ್ರತಿಯೊಂದು ಅವಕಾಶವನ್ನು ವ್ಯಾಪಾರಿ ದೃಷ್ಟಿಯಿಂದ ಬಳಸಿಕೊಳ್ಳಿ ಎಂದರು.
ಶಕ್ತಿ ಪತ್ರಿಕೆಯ ಉಪಸಂಪಾದಕ ಚೀ.ನಾ ಸೋಮೇಶ್ ಮಾತನಾಡಿ, ಈ ಕಾರ್ಯಕಮ ಭರತ ಭೂಮಿಯ ವೈಶಿಷ್ಟ್ಯತೆಯನ್ನು ಸಾರುತ್ತದೆ. ವಿವಿಧತೆಯಲ್ಲಿ ಏಕತೆ, ಏಕತೆಯಲ್ಲಿ ಐಕ್ಯತೆ, ಐಕ್ಯತೆಯಲ್ಲಿ ಸಮಗ್ರತೆಯನ್ನು ಕಾಣಬಹುದು. ಇಲ್ಲಿ ಎಲ್ಲಾ ಜಾತಿ ಪಂಗಡದ ಜನರನ್ನು ಕಾಣುವಾಗ ಭಾರತ ಮಾತೆಯೇ ಇಲ್ಲಿ ಅವಿರ್ಭವಿಸಿದಂತೆ ಆಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ವಾಮಿ ಬೋಧಸ್ವರೂಪಾನಂದಜೀ ಮಹರಾಜ್, ತರಬೇತಿ ಹೊಂದಿರುವ ಎಲ್ಲಾ ಟೈಲರುಗಳನ್ನು ಸೇರಿಸಿ ಸಂಸ್ಥೆಯನ್ನು ಪ್ರಾರಂಭಿಸುವ ಉದ್ದೇಶ ಹೊಂದಿದ್ದು, ತಮ್ಮ ಸಂಸ್ಥೆಯಲ್ಲಿಯೇ ಸ್ಥಳಾವಕಾಶ ನೀಡುವ ಭರವಸೆ ನೀಡಿದರು.
ಶ್ರೀ ರಾಮಕೃಷ್ಣ ಶಾರದಾಮಾತೆಯ ಆಶೀರ್ವಾದ ಮತ್ತು ಸ್ವಾಮಿ ವಿವೇಕಾನಂದರ ಪ್ರೇರಣೆಯಿಂದ ತಮಗೆ ಸೇವಾಕಾರ್ಯ ಮಾಡಲು ಸಾಧ್ಯವಾಯಿತು ಎಂದರು.
ವೇದಿಕೆಯಲ್ಲಿ ಸಬೀತಾ ಕುಲಕರ್ಣಿ, ಮಡಿಕೇರಿ ಚೇಂಬರ್ ಆಫ್ ಕಾಮರ್ಸ್‍ನ ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಗಾರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವನ್ನು ಚಂದನ್ ಕಾಮತ್ ನಿರೂಪಿಸಿದರು.