ಕೊಡಗು ಎಸ್‌ಕೆಎಸ್‌ಎಸ್‌ಎಫ್ ಜಿಸಿಸಿ ಸಮಿತಿಯ ಸದಸ್ಯತ್ವ ಕಾರ್ಡ್ ಅನಾವರಣ

21/08/2020

ಮಡಿಕೇರಿ:ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲೆಯ ಅಧೀನದಲ್ಲಿ ವಿದೇಶದಲ್ಲಿರುವ ಕೊಡಗು ಜಿಲ್ಲೆಯ ಕಾರ್ಯಕರ್ತರಿಗಾಗಿ ರೂಪಿಸಿದ ಕನ್ನಡಿಗರ ಆಶಾಕಿರಣ, ಸದಾ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಎಸ್.ಕೆ.ಎಸ್ ಎಸ್.ಎಫ್ ಜಿಸಿಸಿ – ಕೊಡಗು ಸಮಿತಿಯ ಅಧಿಕೃತ ಸದಸ್ಯತ್ವ ಕೊಡಗು ಕಾರ್ಡ್ ಅನಾವರಣ ಕಾರ್ಯಕ್ರಮವು ಸರಳವಾಗಿ ನಡೆಯುತು.

ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ – ಕೊಡಗು ಅಧ್ಯಕ್ಷರಾದ ಹುಸೈನ್ ಫೈಝಿ ದುಬೈ, ಎಸ್ ಕೆ ಎಸ್ ಎಸ್ ಎಫ್ ಯು ಎ ಇ – ಕೊಡಗು ಕಾರ್ಯದರ್ಶಿಯಾದ ಇರ್ಷಾದ್ ಕೂಡಿಗೆ ರವರಿಗೆ ಸದಸ್ಯತ್ವ ಕಾರ್ಡ್ ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸೌದಿ-ಅರೇಬಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ – ಕೊಡಗು
ದಹ್ವಾ ವಿಂಗ್ ಅಧ್ಯಕ್ಷರಾದ ಸಿದ್ದೀಕ್ ಬಾಖವಿ ರವರು ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ – ಕೊಡಗು ಉಪಾಧ್ಯಕ್ಷರಾದ ಜೈನುದ್ದಿನ್ ಉಸ್ತಾದ್ ರವರಿಗೆ ನೀಡುವುದರೊಂದಿಗೆ ಸದಸ್ಯತ್ವ ಕಾರ್ಡ್ ಅನಾವರಣ ಗಳಿಸಿದರು. ಎಲ್ಲಾ ಕಾರ್ಯಕ್ರಮದ ಯಶಸ್ವಿಗೆ ಹಗಲಿರುಳು ಶ್ರಮಿಸುತ್ತಿರುವ ಎಸ್.ಕೆ‌.ಎಸ್.ಎಸ್.ಎಫ್ ಜಿಸಿಸಿ ಕೊಡಗು ಮಾಧ್ಯಮ ವಿಭಾಗದ ಕಾರ್ಯಗಳನ್ನು ಸಮಿತಿ ಸದಸ್ಯರು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಎಸ್ ಎಸ್ ಎಫ್ ಜಿಸಿಸಿ – ಕೊಡಗು ಮಾಧ್ಯಮ ವಿಭಾಗದ ಅಧ್ಯಕ್ಷರಾದ ಶಫೀಕ್
ನೆಲ್ಲಿಯಹುದಿಕೇರಿ, ಅಶ್ರಫ್ ಮಿಸ್ಬಾಹಿ, ಅಬ್ದುಲ್ ರಝಾಕ್ ಬಜೆಗುಂಡಿ ಭಾಗವಹಿಸಿದ್ದರು. ಆನ್ಲೈನ್ ಮೂಲಕ ನಡೆದ ಕಾರ್ಯಕ್ರಮವನ್ನು ಜಿಸಿಸಿ ಸಮಿತಿಯ ನಾಯಕರುಗಳು ಹಾಗೂ ಸದಸ್ಯರುಗಳು ವೀಕ್ಷಿಸಿದರು. ಎಸ್ ಎಸ್ ಎಫ್ ಜಿಸಿಸಿ – ಕೊಡಗು ಕೋಶಾಧಿಕಾರಿ ಅಬ್ದುಲ್ ರಝಾಕ್ ಫೈಝಿ ವಂದಿಸಿ, ಯಾಹ್ಯಾ ಕೊಡ್ಲಿಪೇಟೆ ಕಾರ್ಯಕ್ರಮ ನಿರೂಪಿಸಿದರು.