ಗೋಮಾಂಸ ಮಾರಾಟ ಮಾಡುತ್ತಿದ್ದವರ ಬಂಧನ
24/08/2020

ಮಡಿಕೇರಿ ಆ. 24 : ಅಕ್ರಮವಾಗಿ ಗೋಮಾಂಸವನ್ನು ತಂದು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಕಲ್ಲುಬಾಣೆ ಬಡಾವಣೆಯ ನಿವಾಸಿಗಳಾದ ಇಬ್ರಾಹಿಂ (21) ಹಾಗೂ ಫಜಲ್ (23) ಎಂಬುವವರೇ ಬಂಧಿತ ಆರೋಪಿಗಳು.
ಹುಣಸೂರು ನಗರದ ಹೊರವಲಯ ಪ್ರದೇಶದಿಂದ ಗೋಮಾಂಸ ತಂದು ಕಲ್ಲುಬಾಣೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಪೊಲೀಸರು ದಾಳಿ ಮಾಡಿ 20 ಕೆ.ಜಿ ಗೋಮಾಂಸ, ರೂ.2700 ನಗದು ಮತ್ತು ಮಾರಾಟಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
